ದೆಹಲಿ: ನಿನ್ನೆಯಷ್ಟೇ ಏರ್ ಇಂಡಿಯಾ (AI171) ವಿಮಾನ ಪತನವಾಗಿ ಅನೇಕ ಸಾವು, ನೋವು ದೇಶ ಶೋಕ ಸಾಗರದಲ್ಲಿ ತೆಲಿಸಿದೆ. ಇದರ ಬೆನ್ನಲ್ಲೇ ಥಾಯ್ಲೆಂಡ್ ನಿಂದ ನವದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ (Air India 379 ) ಬಾಂಬ್ ಬೆದರಿಕೆ ಹಾಕಲಾಗಿದೆ.
ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವನ್ನು ಥೈಲ್ಯಾಂಡ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ವಿಮಾನ ಹಾರಾಟ ಮಾಡುತ್ತಿದ್ದ ವೇಳೆ ಈ ಬೆದರಿಕೆ ಬಂದಿದೆ. ಈ ಕಾರಣದಿಂದ ತಕ್ಷಣ ಭೂಸ್ಪರ್ಶ ಮಾಡಲಾಗಿದೆ.
ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ ಎಂದು ವರದಿಯಾಗಿದೆ. (ಸಾಂಪ್ರದಾಯಿಕ ಚಿತ್ರ ಬಳಸಲಾಗಿದೆ)