ದೊಡ್ಡಬಳ್ಳಾಪುರ: ಎಂಸ್ಯಾಂಡ್ ಸಾಗಿಸುವ ಎರಡು ಟಿಪ್ಪರ್ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕ್ಲೀನರ್ ಗಂಭೀರವಾಗಿ ಗಾಯಗೊಂಡಿರುವ ಘಟನೆ (Accident) ತಾಲೂಕಿನ ಮೆಳೇಕೋಟೆ- ದೊಡ್ಡರಾಯಪ್ಪನ ಹಳ್ಳಿ ನಡುವೆ ಮಂಗಳವಾರ ರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಟಿಪ್ಪರ್ ಒಂದರ ಕ್ಲೀನರ್ ಶಿವು (30 ವರ್ಷ) ಗಂಭೀರವಾಗಿ ಗಾಯಗೊಂಡಿದ್ದು, ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೈ ಮತ್ತು ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿರುವ ಕ್ಲೀನರ್ ಶಿವು ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಟಿಪ್ಪರ್ ಲಾರಿಗಳ ಮುಖಾಮುಖಿ ಡಿಕ್ಕಿ ಹಿನ್ನಲೆಯಲ್ಲಿ ಪಲ್ಟಿ ಹೊಡೆದಿದ್ದು, ನುಜ್ಜುಗುಜ್ಜಾಗಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.