ಬಾಗಲಕೋಟೆ: ಮಗನ ಹುಟ್ಟು ಹಬ್ಬದ ನಿಮಿತ್ಯ ಮೊಹಮ್ಮದ ಹುಸೇನ್ ಅವರು ಸ್ವಂತ ಖರ್ಚಿನಲ್ಲಿ ಸರಕಾರಿ ಪ್ರೌಢಶಾಲೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶಕುಮಾರ ಅವರಿಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಲಕಲ್ಲ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಡಿ ದರ್ಜೆಯ ನೌರರನಾಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಅವರು ತಮ್ಮ ಮನಗ ಜನ್ಮ ದಿನವನ್ನು ಸ್ಮರಣೀಯ ಸಂದರ್ಭವನ್ನಾಗಿ ಮಾಡುವ ನಿಟ್ಟಿನಲ್ಲಿ ಅವರು ಕೆಲಸ ಮಾಡುವ ಶಾಲೆಯ ಕಟ್ಟಡಕ್ಕೆ 30 ಸಾವಿರ ರೂ.ಗಳನ್ನು ಖರ್ಚು ಮಾಡಿ ಸುಣ್ಣ ಬಣ್ಣ ಹಚ್ಚುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದು, ಸಚಿವರು ಅವರಿಗೆ ಅಭನಂದನಾ ಪತ್ರ ಕಳುಹಿಸಿದ್ದಾರೆ.
ಅಭಿನಂದನಾ ಪತ್ರದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಮಗನ ಜನ್ಮದಿನದ ಸಲುವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಸುಣ್ಣ-ಬಣ್ಣ ಬಳಿದಿರುವುದು, ಅವರ ಸಾಮಾಜಿಕ ಕಾಳಜಿಯನ್ನು ಅನುಕರಣೀಯವಾದು ಎಂದು ತಿಳಿಸಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿಯನ್ನು ಬದಿಗಿಟ್ಟು ಇಂತಹ ಉದಾತ್ತವಾದ ಕೆಲಸವನ್ನು ಮಾಡಿರುವ ಅವರಂತಹ ವ್ಯಕ್ತಿಗಳ ಸಂಖ್ಯೆ ವೃದ್ದಿಸಲಿ ಹಾರೈಸಿದ್ದಾರೆ.
ಮೊಹಮ್ಮದಗೆ ಸಿಇಓರಿಂದ ಪ್ರಶಂಸನಾ ಪತ್ರ
ಮಗನ ಹುಟ್ಟು ಹಬ್ಬದ ನಿಮಿತ್ಯ ಸ್ವಂತ ಖರ್ಚಿನಲ್ಲಿ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆ ಕಟ್ಟಡಕ್ಕೆ ಸುಣ್ಣ-ಬಣ್ಣವನ್ನು ಹಚ್ಚಿರುವ ಹಾಗೂ ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರದಾದ ಮೊಹಮ್ಮದ ಹುಸೇನ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಜಿ.ಪಂ ಸಿಇಓ ಟಿ.ಭೂಬಾಲನ ಶುಕ್ರವಾರ ಭೇಟಿ ನೀಡಿ ಅವರಿಗೆ ಪ್ರಶಂಸನಾ ಪತ್ರ ನೀಡುವ ಮೂಲಕ ಅವರ ಕುಟುಂಬದವರನ್ನು ಗೌರವಿಸಿದರು. ಅಲ್ಲದೇ ಅವರ ಮಗನ ಹುಟ್ಟು ಹಬ್ಬದ ಉಡುಗರೆಯಾಗಿ ಶಾಲಾ ಬ್ಯಾಗ್ ಮತ್ತು ಸಮವಸ್ತ್ರಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ ಉಪಸ್ಥಿತರಿದ್ದರು.
 
				 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						