ದೊಡ್ಡಬಳ್ಳಾಪುರ: ಲಾಕ್ಡೌನ್ ಸಂಧರ್ಭದಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ವ್ಯಾಪಾರಿಗಳು ಹಾಗೂ ವರ್ತಕರ ಪಾತ್ರ್ರ ಹೆಚ್ಚಾಗಿದ್ದು, ಖಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಿ ವ್ಯಾಪಾರವಹಿವಾಟನ್ನು ನಡೆಸಬೇಕೆಂದು ಸಬ್ ಇನ್ಸ್ಪೆಕ್ಟರ್ ಬಸವನಗೌಡ ಪಾಟೀಲ್ ಹೇಳಿದರು.
ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ವರ್ತಕರು, ಮಳಿಗೆಯ ಮಾಲೀಕರ ಸಭೆ ನಡೆಸಿ ಈ ಕುರಿತು ಅವರು ತಿಳಿಸಿದರು.
ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ಡೌನ್ ನಡುವೆಯೂ ಅಗತ್ಯ ವಸ್ತುಗಳ ಕೊಳ್ಳಲು ಬೆಳಗ್ಗೆ 6 ರಿಂದ 10ರ ವರೆಗೆ ಅವಕಾಶ ನೀಡಿದೆ. ಈ ಸಂಧರ್ಭದಲ್ಲಿ ಎಪಿಎಂಸಿ ವ್ಯಾಪ್ತಿಯಲ್ಲಿ ಜನಜಂಗುಳಿ ಹೆಚ್ಚಾಗಿ ಉಂಟಾಗುತ್ತಿದ್ದು, ಇದನ್ನು ನಿಯಂತ್ರಿಸಲು ವರ್ತಕರು ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕೆಂದರು.
ಗ್ರಾಹಕರು ವ್ಯಾಪಾರಕ್ಕೆ ಬಂದರೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವಂತೆ ಸಲಹೆ ನೀಡುವ ಹೊಣೆಗಾರಿ ವ್ಯಾಪಾರಿಗಳದ್ದಾಗಿದೆ. ಸೋಂಕು ಮುಕ್ತ ಸಮಾಜಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ, ಒಂದು ವೇಳೆ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸಲು ಮುಂದಾದರೆ ಕಠಿಣ ಕ್ರಮ ಅನಿರ್ವಾರ್ಯ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಎಪಿಎಂಸಿಯಲ್ಲಿ ಬೀದಿ ಬಳಿ ವ್ಯಾಪಾರ ಮಾಡುತಿದ್ದವರನ್ನು ಫ್ಲಾಟ್ ಫಾರಂಗೆ ಸ್ಥಳಾಂತರಿಸಿ ಜನಜಂಗುಳಿ ತಡೆಗೆ ಕ್ರಮ ಹಾಗೂ ಪಕ್ಕ ಪಕ್ಕದಲ್ಲಿದ್ದ ಮಂಡಿಗಳನ್ನು ಸರಿ ಬೆಸೆ ಸಂಖ್ಯೆ ಆಧಾರದ ಮೇಲೆ ಎಪಿಎಂಸಿ ಮಾರುಕಟ್ಟೆಯ ವಿವಿಧೆಡೆ ವಿಸ್ತರಿಸಲು ಬಿ.ಕೆ.ಪಾಟೀಲ್ ಸಲಹೆ ನೀಡಿದರು.
ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಸಿದ್ದರಂಗಸ್ವಾಮಿ, ವರ್ತಕರು, ಮಂಡಿಗಳ ಮಾಲೀಕರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…