ದೊಡ್ಡಬಳ್ಳಾಪುರ: ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ತಾಲೂಕಿನ ಮಧುರೆ ಹೋಬಳಿಯ ಕೆಲ ಗ್ರಾಮಗಳ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ, ಕನಸವಾಡಿ ಸರ್ಕಾರಿ ಪ್ರೌಢಶಾಲೆ 1988-89 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗ ತಂಡದ ವತಿಯಿಂದ 200 ದಿನ ಬಳಕೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ಈ ಕುರಿತು ನೆಲಮಂಗಲ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇಸ್ತೂರಿನ ವಾಸುದೇವ ಮೂರ್ತ ಮಾತನಾಡಿ, ಪ್ರಪಂಚ ಕಂಡಿರದ ಸಂಕಷ್ಟದ ಸಮಯದಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಟುಂಬಗಳಿಗೆ ನೆರವು ನೀಡುವುದು ಮಾನವೀಯ ಕೆಲಸ. ಇಂತಹ ಕೆಲಸದಲ್ಲಿ ನಮ್ಮ ಎಲ್ಲಾ ಗೆಳೆಯರು ಕೈ ಜೋಡಿಸಿ ಒಂದು ಸಣ್ಣ ಸಹಾಯ ಹಸ್ತವನ್ನು ನೀಡಿದ್ದೀವಿ ಎಂದರು.
ಈ ಸಂಧರ್ಭದಲ್ಲಿ ಗೆಳೆಯರ ಬಳಗದ ಹನುಮೇಗೌಡ, ರಾಜೀವ್, ಗೌರಿಶಂಕರ, ರಾಜಣ್ಣ, ರಂಗಸ್ವಾಮಿ, ವಿಜಯ ಕುಮಾರ, ಸುರೇಶ್ ರಾವ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….