ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ) 2019-20 ವರದಿ ಬಿಡುಗಡೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’  ಭಾರತದಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ+)ಯ 2019-20 ವರದಿಯನ್ನು ಬಿಡುಗಡೆ ಮಾಡಿದರು.

ಯುಡಿಐಎಸ್ ಇ+ 2019-20 ವರದಿಯನ್ವಯ, 2018-19ಕ್ಕೆ ಹೋಲಿಸಿದರೆ 2019-20ರಲ್ಲಿ ಶಾಲಾ ಹಂತದ ಎಲ್ಲ ಹಂತಗಳಲ್ಲಿ ಒಟ್ಟು ನೋಂದಣಿ ಪ್ರಮಾಣ ಹೆಚ್ಚಾಗಿದೆ. ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಜನ ಶಿಕ್ಷಕರ ಅನುಪಾತ (ಪಿಟಿಆರ್) ಕೂಡ ಸುಧಾರಣೆಯಾಗಿದೆ.

2019-20ರ ವರದಿಯ ಪ್ರಕಾರ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಬಾಲಕಿಯರ ನೋಂದಣಿ 12.08 ಕೋಟಿಗೂ ಅಧಿಕ.  2018-19ಕ್ಕೆ ಹೋಲಿಸಿದರೆ 14.08 ಲಕ್ಷಕ್ಕೂ ಅಧಿಕ ಹೆಚ್ಚಳವಾಗಿದೆ. 2012-13 ಮತ್ತು 2019-20ರ ನಡುವೆ, ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಪ್ರೌಢಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡೂ ಮಟ್ಟದಲ್ಲೂ ಸುಧಾರಣೆಯಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2019-20ರಲ್ಲಿ ಅಂತರ್ಜಾಲ ಸೌಕರ್ಯ, ಕಂಪ್ಯೂಟರ್ ಗಳ ಕಾರ್ಯನಿರ್ವಹಣೆ, ವಿದ್ಯುತ್ ಹೊಂದಿರುವ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಯುಡಿಐಎಸ್ ಇ+ ಯ 2019-20 ವರದಿಯಿಂದ ಕಂಡು ಬಂದಿದೆ.

ಮತ್ತೊಂದು ಪ್ರಮುಖ ಸುಧಾರಣೆ ಎಂದರೆ, ಕೈ ತೊಳೆಯುವ ಸೌಕರ್ಯ ಹೊಂದಿರುವ ಶಾಲೆಗಳ ಸಂಖ್ಯೆ ಹೆಚ್ಚಾಗಿರುವುದು. 2019-20ಯಲ್ಲಿ ಭಾರತದಲ್ಲಿ ಶೇ.90ಕ್ಕೂ ಅಧಿಕ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯವಿದೆ, 2012-13ರಲ್ಲಿ ಈ ಪ್ರಮಾಣ ಶೇ.36.3ರಷ್ಟು ಮಾತ್ರ ಇತ್ತು.

2012-13ರಿಂದ ಚಾಲ್ತಿಯಲ್ಲಿದ್ದ ಯುಡಿಐಎಸ್ ಇ ದತ್ತಾಂಶ ಸಂಗ್ರಹ ವ್ಯವಸ್ಥೆಯಲ್ಲಿ ಕಾಗದದ ಸ್ವರೂಪದಲ್ಲಿ ಹಸ್ತಚಾಲಿತ ದತ್ತಾಂಶ ಭರ್ತಿ ವ್ಯವಸ್ಥೆ ಇತ್ತು ಮತ್ತು ನಂತರದ ಬ್ಲಾಕ್ ಅಥವಾ ಜಿಲ್ಲಾ ಮಟ್ಟದಲ್ಲಿ ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಶಾಲೆಗಳಿಂದ ಆನ್ ಲೈನ್ ದತ್ತಾಂಶ ಸಂಗ್ರಹಣೆಯು ಯುಡಿಐಎಸ್ ಇ+  ವ್ಯವಸ್ಥೆಯನ್ನು 2018-91ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯದ  ಯುಡಿಐಎಸ್ ಇ+ ಪ್ರಕಟಣೆ 2019-20ನೇ ಸಾಲಿಗೆ ಸಂಬಂಧಿಸಿದ್ದಾಗಿದೆ.

ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ+) ಯ 2019-20 ವರದಿಯ ಪ್ರಮುಖಾಂಶಗಳು

2019-20ರಲ್ಲಿ ಶಾಲಾ ಶಿಕ್ಷಣದಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಸೇರಿದ  ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 26.45 ಕೋಟಿ ದಾಟಿದೆ. 2018-19 ಕ್ಕೆ ಹೋಲಿಸಿದರೆ 42.3 ಲಕ್ಷಕ್ಕೂ ಅಧಿಕವಾಗಿದೆ.

2018-19 ಕ್ಕೆ ಹೋಲಿಸಿದರೆ 2019-20 ರಲ್ಲಿ ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಒಟ್ಟು ನೋಂದಣಿ ಪ್ರಮಾಣ ಸುಧಾರಣೆಯಾಗಿದೆ.

ಒಟ್ಟು ಪ್ರವೇಶ ಅನುಪಾತ ಶೇ.89.7ಕ್ಕೆ (ಶೇ.87.7ರಿಂದ) ಹೆಚ್ಚಳವಾಗಿದೆ, ಪ್ರೌಢ ಹಂತದಲ್ಲಿ ಶೇ.97.8 (ಶೇ.96.1ರಿಂದ ) ಪ್ರಾಥಮಿಕ ಹಂತದಲ್ಲಿ ಶೇ.77.9 (ಶೇ.76.9ರಿಂದ) ಪೌಢಶಿಕ್ಷಣ ಹಂತದಲ್ಲಿ ಶೇ 51.4ರಷ್ಟು (ಶೇ.50.1ರಿಂದ) ಪ್ರೌಢಶಿಕ್ಷಣ ಹಂತದಲ್ಲಿ 2019-20 (2018-19ರಿಂದ).

2012-13ರಿಂದ 2019-20 ರ ನಡುವೆ ಪ್ರೌಢಶಿಕ್ಷಣದಲ್ಲಿ ಒಟ್ಟು ನೋಂದಣಿ ಅನುಪಾತ (ಜಿಇಆರ್) ಅಂದಾಜು ಶೇ.10ರಷ್ಟು ಸುಧಾರಿಸಿದೆ. ಜಿಇಆರ್ 2012-13ರಲ್ಲಿ ಶೇ.68.7ರಷ್ಟು ಇತ್ತು, ಅದಕ್ಕೆ ಹೋಲಿಸಿದರೆ ಶೇ. 78ರಷ್ಟು ತಲುಪಿದೆ.  

2012-13ರಿಂದ 2019-20ರ ನಡುವಿನ ಅವಧಿಯಲ್ಲಿ ಹೈಯರ್ ಸೆಕೆಂಡರಿಯಲ್ಲಿ ಜಿಇಆರ್ ಶೇ.11ಕ್ಕೂ ಹೆಚ್ಚಾಗಿದೆ. 2012-13ರಲ್ಲಿ ಹೈಯರ್ ಸೆಕೆಂಡರಿಯಲ್ಲಿ ಜಿಇಆರ್ ಪ್ರಮಾಣ ಶೇ.40.1ರಷ್ಟು ಇದ್ದಿದ್ದು, 2019-20ರಲ್ಲಿ ಶೇ.51.4ರಷ್ಟು ತಲುಪಿದೆ.

ಶಾಲಾ ಶಿಕ್ಷಣದಲ್ಲಿ ತೊಡಗಿರುವ ಶಿಕ್ಷಣ ಸಂಖ್ಯೆ 2019-20ರಲ್ಲಿ 96.87 ಲಕ್ಷಕ್ಕೆ ತಲುಪಿದೆ. ಇದು 2018-19ಕ್ಕೆ ಹೋಲಿಸಿದರೆ 2.57 ಲಕ್ಷ ಅಧಿಕ.

ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಜನ ಶಿಕ್ಷಕರ ಅನುಪಾತ (ಪಿಟಿಆರ್) ಸುಧಾರಣೆಯಾಗಿದೆ.

2019-20ರಲ್ಲಿ ಪ್ರಾಥಮಿಕದಲ್ಲಿ ಪಿಟಿಆರ್ ಪ್ರಮಾಣ 26.5, ಅಪ್ಪರ್ ಪ್ರೈಮರಿ ಮತ್ತು ಸೆಕೆಂಡರಿಯ ಪಿಟಿಪಿ 18.5 ಮತ್ತು ಹೈಯರ್ ಸೆಕೆಂಡರಿಯಲ್ಲಿ ಪಿಟಿಆರ್ 26.1ರಷ್ಟಿದೆ.

2019-20 ಪ್ರಾಥಮಿಕದಲ್ಲಿ ಪಿಟಿಆರ್ 26.5ರಷ್ಟು, 2012-13ರಲ್ಲಿ ಇದು 34.0ರಷ್ಟಿತ್ತು. ಅಪ್ಪರ್ ಪ್ರೈಮರಿಯಲ್ಲಿ 18.5ರಷ್ಟು ಇದ್ದಿದ್ದು, 2012-13ರಲ್ಲಿ 23.1ರಷ್ಟಿತ್ತು.

2019-20 ಪ್ರೌಢಶಿಕ್ಷಣದಲ್ಲಿ ಪಿಟಿಆರ್ 18.5ರಷ್ಟು, 2012-13ರಲ್ಲಿ ಇದು 29.7ರಷ್ಟಿತ್ತು. ಅಪ್ಪರ್ ಪ್ರೈಮರಿಯಲ್ಲಿ 18.5ರಷ್ಟು ಇದ್ದಿದ್ದು, 2012-13ರಲ್ಲಿ 23.1ರಷ್ಟಿತ್ತು.

2019-20 ಹೈಯರ್ ಸೆಕೆಂಡರಿಯಲ್ಲಿ ಪಿಟಿಆರ್ 26.1ರಷ್ಟು, 2012-13ರಲ್ಲಿ ಇದು 39.2ರಷ್ಟಿತ್ತು.

ವಿಶೇಷಚೇತನ ವ್ಯಕ್ತಿಗಳಿಗೆ ಸಾರ್ವತ್ರಿಕ ಶಿಕ್ಷಣ ಲಭ್ಯತೆಯನ್ನು ಖಾತ್ರಿಪಡಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ದಿವ್ಯಾಂಗ ವಿದ್ಯಾರ್ಥಿಗಳ ಪ್ರವೇಶ 2018-19ರಲ್ಲಿ ಶೇ.6.52ರಷ್ಟು ಹೆಚ್ಚಾಗಿದೆ.

2019-20 ರಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಬಾಲಕಿಯರ ನೋಂದಣಿ 12.08ಕೋಟಿಗೂ ಅಧಿಕವಾಗಿದೆ. ಇದು 2018019ಕ್ಕೆ ಹೋಲಿಸಿದರೆ 14.08 ಕೋಟಿ ಹೆಚ್ಚಾಗಿದೆ.

ಒಟ್ಟು ಬಾಲಕಿಯರ ನೋಂದಣಿ ಅನುಪಾತ 2019-20ರಲ್ಲಿ (2018-19ರ ಅಂಕಿ ಅಂಶ) ಅಪ್ಪರ್ ಪ್ರಮೈರಿ ಹಂತದಲ್ಲಿ ಶೇ.90.0ಕ್ಕೆ ಹೆಚ್ಚಾಗಿದೆ (ಶೇ.88.5ರಿಂದ), ಪ್ರಾಥಮಿಕ ಹಂತದಲ್ಲಿ ಶೇ 98.7 (ಶೇ.96.1ರಿಂದ), ಸೆಕೆಂಡರಿ ಹಂತದಲ್ಲಿ ಶೇ.77.8 ( ಶೇ.76.9ರಿಂದ) ಮತ್ತು ಪ್ರೌಢಶಿಕ್ಷಣದಲ್ಲಿ ಶೇ 52.4(ಶೇ.50.8ರಿಂದ)  ಹೆಚ್ಚಾಗಿದೆ.

2012-13ರಿಂದ 20190-20ರ ನಡುವೆ ಸೆಕೆಂಡರಿ ಹಂತದಲ್ಲಿ ಬಾಲಕಿಯರ ಒಟ್ಟು ನೋಂದಣಿ ಅನುಪಾತ ಶೇ.13ರಷ್ಟು ಹೆಚ್ಚಾಗಿದೆ. ಇದು 2012-13ರಲ್ಲಿ ಶೇ.39.4ರಷ್ಟಿತ್ತು, ಅದು 2019-20ರಲ್ಲಿ ಶೇ.52.4ಕ್ಕೆ ಏರಿಕೆಯಾಗಿದೆ. ಹೆಚ್ಚಳ ಬಾಲಕರಿಗಿಂತ ಏರಿಕೆಯಾಗಿದೆ. ಹೈಯರ್ ಸೆಕೆಂಡರಿಯಲ್ಲಿ ಬಾಲಕರ ಜಿಇಆರ್ ಪ್ರಮಾಣ 2019-20ರಲ್ಲಿ ಶೇ.50.5ರಷ್ಟಿದೆ, 2012-13ರಲ್ಲಿ ಶೇ.40.8ರಷ್ಟು ಇತ್ತು.

2012-13  ಮತ್ತು 2019-20 ನಡುವೆ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎರಡಲ್ಲೂ ಬಾಲಕಿಯರ ಜಿಇಆರ್ ಪ್ರಮಾಣ ಬಾಲಕರಿಗಿಂತ ಅಧಿಕವಾಗಿದೆ.

ಸೆಕೆಂಡರಿ ಹಂತದಲ್ಲಿ ಬಾಲಕಿಯರ ಜಿಇಆರ್ 2019-20 ರಲ್ಲಿ 9.6%  ರಷ್ಟು ಹೆಚ್ಚಾಗಿ  77.8% ತಲುಪಿದೆ, 2012-13ರಲ್ಲಿ ಶೇ.68.2% ರಷ್ಟಿತ್ತು.

2012-13 ಮತ್ತು 2019-20 ರ ನಡುವೆ ಸೆಕೆಂಡರಿ ಮತ್ತು ಹೈಯರ್ ಸೆಕೆಂಡಿಯಲ್ಲಿ ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಸುಧಾರಣೆಯಾಗಿದೆ.  2019-20ರಲ್ಲಿ ಹೈಯರ್ ಸೆಕೆಂಡರಿ ಹಂತದಲ್ಲಿ ಜಿಪಿಐ ಸುಧಾರಣೆಯಾಗಿದೆ, ಅದು 1.04 ತಲುಪಿದೆ, 2012-13ರಲ್ಲಿ ಅದು 0.97ರಷ್ಟಿತ್ತು.

2019-20ರಲ್ಲಿ ಭಾರತದ ಶೇ.80ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯುತ್ ಕಾರ್ಯನಿರ್ವಹಣೆ ಇದೆ. ಇದು 2018-19ಕ್ಕೆ ಹೋಲಿಸಿದರೆ ಶೇ.6ರಷ್ಟು ಸುಧಾರಿಸಿದೆ.

ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಗಳನ್ನು ಹೊಂದಿರುವ ಶಾಲೆಗಳ ಸಂಖ್ಯೆ 2019-20ರಲ್ಲಿ 5.2ಲಕ್ಷಕ್ಕೆ ಹೆಚ್ಚಳವಾಗಿದೆ, 2018-19ರಲ್ಲಿ ಇದು 4.7 ಲಕ್ಷ ಇತ್ತು.

2018-19ರಲ್ಲಿ ಅಂತರ್ಜಾಲ ಸೌಕರ್ಯ ಹೊಂದಿರುವ ಶಾಲೆಗಳ ಸಂಖ್ಯೆ 2.9ಲಕ್ಷ  ಇತ್ತು, ಅದು 2019-20ರಲ್ಲಿ 3.36 ಲಕ್ಷಕ್ಕೆ ಹೆಚ್ಚಳವಾಗಿದೆ.

2019-20ರಲ್ಲಿ ಭಾರತದಲ್ಲಿ ಶೇ.90ಕ್ಕೂ ಅಧಿಕ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯವಿದೆ. ಇದು ಮಹತ್ವದ ಸುಧಾರಣೆಯಾಗಿದೆ, ಏಕೆಂದರೆ 2012-13ರಲ್ಲಿ ಈ  ಪ್ರಮಾಣ ಶೇ.36.3ರಷ್ಟಿತ್ತು.

2019-20ರಲ್ಲಿ ಶೇ.83ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿದೆ, 2018-19ಕ್ಕೆ ಹೋಲಿಸಿದರೆ ಇದು ಶೇ.7ರಷ್ಟು ಸುಧಾರಣೆಯಾಗಿದೆ. 2012-13ರಲ್ಲಿ ಶೇ.54.6ರಷ್ಟು ಶಾಲೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು.

2019-20ರಲ್ಲಿ ಶೇ.82ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ, ಇದು 2018-19ಕ್ಕೆ ಹೋಲಿಸಿದರೆ ಶೇ.4ರಷ್ಟು ಹೆಚ್ಚಾಗಿದೆ. 2012-13ರಲ್ಲಿ ಸುಮಾರು ಶೇ.61.1ರಷ್ಟು ಶಾಲೆಗಳಲ್ಲಿ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗಿತ್ತು.

2019-20ರಲ್ಲಿ ಭಾರತದಲ್ಲಿ ಶೇ.84ಕ್ಕೂ ಅಧಿಕ ಶಾಲೆಗಳಲ್ಲಿ ಗ್ರಂಥಾಲಯ/ಓದುವ ಕೊಠಡಿ/ ರೀಡಿಂಗ್ ಕಾರ್ನರ್ ಇದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.4ರಷ್ಟು ಸುಧಾರಿಸಿದೆ. 2012-13ರಲ್ಲಿ ಶೇ.69.2ರಷ್ಟು ಶಾಲೆಗಳಲ್ಲಿ ಮಾತ್ರ ಗ್ರಂಥಾಲಯ/ಓದುವ ಕೊಠಡಿ/ ರೀಡಿಂಗ್ ಕಾರ್ನರ್ ಇತ್ತು ಎಂದು ವರದಿ ತಿಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಸಿಎಂ ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಸಿಎಂ ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಡೆಯುತ್ತೇವೆ: ಡಿಸಿಎಂ

"ಸಿಎಂ ಅವರು ಹೇಳಿದ ಮೇಲೆ ಮುಗಿಯಿತು. ಅವರು ಹೇಳಿದ ಮೇಲೆ ಇನ್ನೇನಿದೆ? ಅವರು ಹೇಗೆ ಹೇಳುತ್ತಾರೋ ಹಾಗೆ ನಾವು ಕೇಳುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೇಳಿದ್ದಾರೆ.

[ccc_my_favorite_select_button post_id="115410"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!