ದೊಡ್ಡಬಳ್ಳಾಪುರ: ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ನಗರದಲ್ಲಿನ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ರಸ್ತೆಯಲ್ಲಿಯೇ ಭಾರೀ ಪ್ರಮಾಣದಲ್ಲಿ ಮಳೆ ನೀರು ಹರಿದ್ದರಿಂದ ಸಂಚಾರಕ್ಕು ಅಡ್ಡಿಯಾಗುವ ಜೊತೆಗೆ ಹಲವು ಅವಾಂತರಗಳನ್ನು ಸೃಷ್ಟಿಸಿತ್ತು.
ಇಂದು ಬೆಳ್ಳಂಬೆಳಗ್ಗೆ ನಗರದ ತಾಲೂಕು ಕಚೇರಿ ವೃತ್ತ ಹಾಗೂ ಕಾಳಮ್ಮ ಗುಡಿ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿ ಒಳ ಚರಂಡಿ ತುಂಬಿದ ಕಾರಣ ಚರಂಡಿಯಲ್ಲಿದ್ದ ರಕ್ತ ರಸ್ತೆಯಲ್ಲಿ ಹರಿಯುತ್ತಿದೆ.
ಮಳೆಯಿಂದ ಒಳ ಚರಂಡಿ ತುಂಬಿದ್ದು, ಮಾಂಸದ ಅಂಗಡಿಗಳವರು ಒಳಚರಂಡಿಗೆ ಹರಿ ಬಿಟ್ಟಿರುವ ರಕ್ತ ರಸ್ತೆಯಲ್ಲಿ ಹರಿಯುತ್ತಿದೆ. ಈ ದೃಶ್ಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರವಾಗಿದ್ದರೆ, ನಗರಸಭೆ ಅಧಿಕಾರಿಗಳ ಬೇಜವಬ್ದಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪದೇ ಪದೇ ಈ ವ್ಯಾಪ್ತಿಯಲ್ಲಿ ರಕ್ತ ಹರಿಯುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಮಾಂಸದಂಗಡಿಗಳು ಇಲ್ಲ ಎನ್ನುತ್ತಾರೆ, ಆದರೆ ಈ ರೀತಿ ರಸ್ತೆಯಲ್ಲಿ ರಕ್ತ ಹರಿದು ರೋಗಗಳಿ ಕಾರಣವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಕೀರ್ತಿಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿದ ನಗರಸಭೆ ಸಿಬ್ಬಂದಿಗಳು ಒಳಚರಂಡಿ ಸ್ವಚ್ಚಕಾರ್ಯದಲ್ಲಿ ನಿರತರಾಗಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..