ಬೆಂ.ಗ್ರಾ.ಜಿಲ್ಲೆ: ಕೋವಿಡ್-19ರ ಎರಡನೇ ಅಲೆ ಕಾರಣದಿಂದ ಸರ್ಕಾರದ ಆದೇಶದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ರೂ.10,000/- ಮತ್ತು ಕನಿಷ್ಟ ರೂ.2,000/-ಕ್ಕೆ ಮಿತಿಗೊಳಿಸಿ, ಪ್ರದೇಶಕ್ಕನುಗುಣವಾಗಿ ಪರಿಹಾರಧನವನ್ನು ವಿತರಿಸಲಾಗುವುದು. ಈಗಾಗಲೇ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರ ರೈತರ ನೋಂದಣಿ ಸಂಖ್ಯೆ ಹೊಂದಿದ ಒಟ್ಟು 7964 ರೈತ ಫಲಾನುಭವಿಗಳಿಗೆ ರೂ.305.30 ಲಕ್ಷಗಳ ಪರಿಹಾರಧನವನ್ನು ಡಿಬಿಟಿ ಮೂಲಕ ರೈತ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ರೈತರ ನೋಂದಣಿ ಸಂಖ್ಯೆ ಹೊಂದಿಲ್ಲದ ರೈತರು, 2021 ಜುಲೈ 12 ರೊಳಗಾಗಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ರೈತರ ನೋಂದಣಿ ಸಂಖ್ಯೆಯನ್ನು ಸೃಜಿಸಲು ತಿಳಿಸಲಾಗಿದೆ.
ಬೆಳೆ ಸಮೀಕ್ಷೆಯಲ್ಲಿರುವಂತೆ ರೈತರ ನೋಂದಣಿ ಸಂಖ್ಯೆ ಹೊಂದಿಲ್ಲದ ದೊಡ್ಡಬಳ್ಳಾಪುರ ತಾಲ್ಲೂಕು 495, ದೇವನಹಳ್ಳಿ ತಾಲ್ಲೂಕು 3353, ಹೊಸಕೋಟೆ ತಾಲ್ಲೂಕು 1496, ನೆಲಮಂಗಲ 121 ಸೇರಿದಂತೆ ಒಟ್ಟು 5465 ಸರ್ವೇ ನಂಬರ್‌ಗಳ ಸಂಖ್ಯೆಯ ರೈತ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಆರ್.ಟಿ.ಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ಪಾಸ್ ಪೋರ್ಟ್ ಅಳತೆಯ ಛಾಯಾಚಿತ್ರ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರು ಜಾತಿ ಪ್ರಮಾಣ ಪತ್ರವನ್ನು ನೀಡಿ ಆರ್.ಡಿ ಸಂಖ್ಯೆಯನ್ನು ನವೀಕರಿಸಿ ನೀಡುವುದು, ಪಹಣಿದಾರರು ಜಂಟಿ ಖಾತೆ ಹೊಂದಿದ್ದಲ್ಲಿ ಅಭ್ಯಂತರ ಪತ್ರವನ್ನು(ರೂ.20ರ ಛಾಪಾಕಾಗದದೊಂದಿಗೆ) ನೀಡಬೇಕು. ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರವನ್ನು ನೀಡಬೇಕು ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ತಪ್ಪಿದ್ದಲ್ಲಿ ಸರಿಪಡಿಸಿಕೊಡಲು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲಾತಿಗಳನ್ನು 2021ರ ಜುಲೈ 12 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ(ಜಿಪಂ) ಪಿ.ಮಂಜುಳಾ(ಮೊ.ಸಂ.: 9448825101), ತಾಂತ್ರಿಕ ಸಹಾಯಕ ಉಮಾಪತಿ ಹೆಚ್.ಜಿ.(ಮೊ.ಸಂ.:9606117615), ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಶ್ರೀನಿವಾಸ್ ಎಂ.(ಮೊ.ಸಂ.:9632410677), ತಾಂತ್ರಿಕ ಸಹಾಯಕ ಮಾರುತಿ(ಮೊ.ಸಂ.: 9741895988), ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಪ್ರಶಾಂತ್.ಆರ್(ಮೊ.ಸಂ.:9538953949), ತಾಂತ್ರಿಕ ಸಹಾಯಕ ಸೋಮಶೇಖರ್(ಮೊ.ಸಂ.: 8453966868), ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿಪಂ) ಸುಬ್ರಮಣ್ಯ.ಜೆ.ವಿ.(ಮೊ.ಸಂ.: 9901754339), ತಾಂತ್ರಿಕ ಸಹಾಯಕ ವಿಜಯಕುಮಾರ್(ಮೊ.ಸಂ.: 9902581832) ಇವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕ ಮಾಹಾಂತೇಶ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..