ದೊಡ್ಡಬಳ್ಳಾಪುರ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ಕು ಮಂದಿ ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ.ಡಿ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ರಾಧಕೃಷ್ಣ, ರಂಗನಾಥ, ವೆಂಕಟೇಶ್ ವಿಶೇಷ ರಾತ್ರಿ ಗಸ್ತಿನಲ್ಲಿದ್ದು, ವಾಹನಗಳನ್ನು ತಪಸಾಣೆ ಮಾಡುತ್ತಿದ್ದಾಗ ಅನುಮಾನಸ್ಪದವಾಗಿ ಕಂಡುಬಂದ ಮುತ್ತೂರು ನಿವಾಸಿಗಳಾದ ನಜೀರ್ @ ಅಮರ್ ಬಿನ್ ಲೇಟ್ ಕರೀಂಸಾಬ್(28 ವರ್ಷ), ಕೇಶವ @ ಸುಣ್ಣ ಬಿನ್ ಲೇಟ್ ಪ್ರಕಾಶ(19ವರ್ಷ), ಸಲ್ಮಾನ್ @ ಮಾನತ್ ಬಿನ್ ಸಾಧಿಕ್ (20 ವರ್ಷ), ಗೌರಿಬಿದನೂರು ತಾಲೂಕಿನ ಹೊಸೂರು ನಿವಾಸಿ ಶ್ರೀಕಾಂತ @ ಮೊಟಾ ಬಿನ್ ವೆಂಕಟೇಶ್ (21ವರ್ಷ) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳಿಂದ ಎರಡು ಪಲ್ಸರ್ ಮೋಟಾರ್ ಸೈಕಲ್, ಮೂರು ಗ್ಯಾಸ್ ಸ್ಟೌವ್, 200 ಮೀಟರ್ ಕೇಬಲ್, ಒಟ್ಟು ಸುಮಾರು 1,04,000/- ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ಜಿಲ್ಲೆಯಪೊಲೀಸ್ ಅಧೀಕ್ಷಕ ಡಾ.ಕೋನ ವಂಶೀಕೃಷ್ಣ, ಅಪರ ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್, ಡಿವೈಎಸ್ಪಿ ಟಿ. ರಂಗಪ್ಪ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಎಸ್.ಸತೀಶ್ ಅವರ ನೇತ್ರತ್ವದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..