
ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಯಡಿಯೂರಪ್ಪ ವಿಚಾರದ ಕುರಿತು ಬಿಜೆಪಿ ವಿರುದ್ದ ಮಠಾಧೀಶರ ಅವಹೇಳನಾಕಾರಿ ಹೇಳಿಕೆ ಸಲ್ಲದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವಕ್ತಾರರಾದ ಪುಷ್ಪಾಶಿವಶಂಕರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಪಕ್ಷದ ನಾಯಕರೆನ್ನುವುದರಲ್ಲಿ ಎರಡು ಮಾತಿಲ್ಲ. ಅದರೆ ಅವರನ್ನು ಓಲೈಸುವ ಸಲುವಾಗಿ ದಿಂಗಾಲೇಶ್ವರ ಸ್ವಾಮಿಜಿ ಬಿಜೆಪಿ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ.
ರಾಷ್ಟ್ರೀಯತೆಯ ಮನೋಭಾವದಿಂದ ಕಟ್ಟಿರುವ ಪಕ್ಷದ ಕುರಿತು ರೂಪುರೇಷೆ ತಿಳಿಯದೆ ಬಾಯಿಗೆ ಬಂದಂತೆ ಮಾತನಾಡಿರುವುದು ಬೇಸರದ ಸಂಗತಿಯಾಗಿದೆ.
ಯಡಿಯೂರಪ್ಪ ಕೇವಲ ಒಂದು ಸಮುದಾಯದ ನಾಯಕರಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ, ಅವರ ಕುರಿತು ಇಡೀ ಪಕ್ಷಕ್ಕೆ ಹೆಮ್ಮೆಯಿದೆ. ಆದರೆ ಜಾತಿಗೋಸ್ಕರ ಶ್ರೀಗಳಾದವರು ಇಡೀ ಪಕ್ಷವನ್ನು ಮನಸೋ ಇಚ್ಚೆ ನಿಂದನೆ ಮಾಡುವುದು ಸಲ್ಲದು.
ಬಸವಣ್ಣನವರು, ಶಿವಕುಮಾರ ಸ್ವಾಮಿಗಳು ನಡೆದಾಡುವ ದೇವರು ಅಂತಹ ಮಹಾ ಚೇತನಗಳ ವಿಚಾರಗಳನ್ನು ಮಠಾಧೀಶರು ಅಳವಡಿಸಿಕೊಂಡು ಸಮಾಜಕ್ಕೆ ದಾರಿ ತೋರಬೇಕಿದೆ. ಬಿಜೆಪಿ ಪಕ್ಷ ಸರ್ವನಾಶವಾಗಲಿದೆ ಎಂಬ ಪದ ಬಳಕೆ ಮಾಡಿರುವ ಶ್ರೀಗಳು ಪ್ರಜ್ಞೆ ಇಲ್ಲದಂತವರು ಮಾಡುವ ಕಾರ್ಯವಾಗಿದೆ. ಮಠಾಧೀಶರ ಈ ವರ್ತನೆ ಸಮಾಜಕ್ಕೆ ತಪ್ಪು ಸಂದೇಶಕ್ಕೆ ಕಾರಣವಾಗಿದೆ. ಇವರನ್ನು ನೋಡಿ ಇತರೆ ಸಮುದಾಯದ ಮಠಾಧಿಶರು ಮುಂದಾದರೆ ಪರಿಣಾಮ ಏನಾಗಲಿದೆ ಎಂದು ಪ್ರಶ್ನಿಸಿದರು.
ಧರ್ಮದ ರಕ್ಷಣೆ, ದೇಶದ ರಕ್ಷಣೆ ವಿಚಾರವಾಗಿ ಹೊರಬಾರದ ಮಠಾಧೀಶರು, ರಾಜಕಾರಣದ ವಿಚಾರಕ್ಕೆ ಹೊರಬಂದಿರುವುದು ವಿಪರ್ಯಾಸ. ಎರಡು ವರ್ಷ ಸಿಎಂ ಮುಂದೆವರೆಸುವ ವಿಚಾರವಾಗಿ ಹೊರಬಂದು ಬಿಜೆಪಿ ಪಕ್ಷವನ್ನು ನಿಂದನೆ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಸದೃಢವಾಗಿ ಬೆಳೆದಿದೆಯೇ ಹೊರತು ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ ಹಾಗೂ ಈ ಕುರಿತು ಬ್ಲಾಕ್ ಮೇಲ್ ಮಾಡುವುದು ಸಲ್ಲದು ಎಂದು ಪುಷ್ಪಾ ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ ಮಾತನಾಡಿ, ಜನನಾಯಕ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಸುವ ವಿಚಾರ ಹೈಕಮಾಂಡ್ ನಿರ್ಣಯ, ಅದು ಬಹಿರಂಗವಾಗಿಲ್ಲ. ಆದರೆ ಮಾಧ್ಯಮಗಳ ವರದಿ ನಂಬಿ ಮಠಾಧೀಶರು ಪಕ್ಷದ ವಿರುದ್ದ ಬಹಿರಂಗವಾಗಿ ನಿಂದನಾತ್ಮಕ ಹೇಳಿಕೆ ನೀಡಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿ ಸುತ್ತಿದ್ದಾರೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಮುದ್ದಪ್ಪ, ಮುಖಾಂಡರಾದ ಶಿವಶಂಕರ್, ತಾಲೂಕು ಕಾರ್ಯದರ್ಶಿ ಕಾಂತರಾಜ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..