ಬೆಂಗಳೂರು: ಚಲನಚಿತ್ರ ನಟ ದರ್ಶನ್ ಅವರ ವಿರುದ್ಧ ದಲಿತನ ಮೇಲೆ ಹಲ್ಲೆ ಆರೋಪ ಮಾಡಿರುವ ಪತ್ರಕರ್ತ ಇಂದ್ರಜಿತ್ ಲಂಕೇಶ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದರ್ಶನ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ರಾಜ್ಯದ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್, ತಹಶೀಲ್ದಾರ್ ಅವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವ ಮೂಲಕ ಇಂದ್ರಜಿತ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ ತೇಜೋವಧೆ ಮಾಡಲೆಂದೇ ಇಲ್ಲ ಸಲ್ಲದ ಆರೋಪವನ್ನು ಸೃಷ್ಠಿಸಿ ಇದರಿಂದ ಖ್ಯಾತಿ ಪಡೆಯಬೇಕೆನ್ನುವ ದುರುದ್ದೇಶ ಹೊಂದಿದ್ದಾರೆ. ಅದರಲ್ಲೂ ದಲಿತ ಸಪ್ಲೈಯರ್ ಗೆ ಹೊಡೆದರು ಎಂದು ಸುಳ್ಳು ಆರೋಪ ಮಾಡಿ ಒಂದು ಕೋಮಿನ ಹಿಂದುಳಿದ ಜನಾಂಗದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯದಲ್ಲಿ ಕೋಮು ವಿಷ ಬೀಜ ಬಿತ್ತಲು ಮುಂದಾಗಿರುವುದು ವಿಪರ್ಯಾಸ. ಇದುವರೆಗೆ ಯಾರೋಬ್ಬರು ಹಲ್ಲೆ ನಡೆದಿದೆ ಎಂದು ದರ್ಶನ್ ವಿರುದ್ಧ ದೂರು ನೀಡಿಲ್ಲ. ಹಾಗೂ ಇದುವರೆಗೆ ಯಾವ ದಲಿತ ಸಂಘಟನೆ ಕೂಡ ದರ್ಶನ್ ಅವರ ವಿರುದ್ಧ ಆರೋಪ ಮಾಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, ದೊಡ್ಡಬಳ್ಳಾಪುರ, ಹಾವೇರಿ, ಗದಗ, ವಿಜಯಪುರ, ಮಳವಳ್ಳಿ, ಆಡುಗೋಡಿ, ಸುರಪುರ, ಕುಣಿಗಲ್, ಎಲೆಕ್ಟ್ರಾನಿಕ್ ಸಿಟಿ, ಪಿರಿಯಾಪಟ್ಟಣ, ಕೆ.ಆರ್.ಪುರಂ, ಧಾರವಾಡ, ಹುಣಸಗಿ, ಹುಬ್ಬಳ್ಳಿ, ಹಿರೆಕೆರೂರು, ಮಂಡ್ಯ, ಗಿರಿನಗರ, ಚಿಕ್ಕಮಗಳೂರು, ಶಿರಾ, ಗದಗ, ಗಜೇಂದ್ರ ಗಡ, ಚಿತ್ರದುರ್ಗ, ನರಗುಂದ, ಬೀದರ್, ಗಂಗಾವತಿ, ಕೊಪ್ಪಳ, ಹೊನ್ನಾವರ, ಚನ್ನಪಟ್ಟಣ ಸೇರಿದಂತೆ ರಾಜ್ಯದ ಬಹುತೇಕ ಕಡೆ ದೂರು ದಾಖಲಾಗಿದ್ದು, ಕೆಲವೆಡೆ ಪ್ರತಿಭಟನೆಗಳು ನಡೆಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..