ಬೆಂಗಳೂರು: ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವುದಾಗಿ ಹಾವೇರಿ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿಯಾಗಿ ನೇಮಕದ ಬಳಿಕ ಸರ್ಕಾರದ ಸೂಚನೆಯಂತೆ ಉಸ್ತುವಾರಿ ಜಿಲ್ಲೆಯಲ್ಲಾದ ನೆರೆಹಾವಳಿ ಪರಿಶೀಲನೆಗೆ ತೆರಳುವ ಮುನ್ನ ಬೆಂಗಳೂರು ನಿವಾಸದ ಬಳಿ ಸುದ್ದಿಗಾರರೊಂದಿಗೆ ಬಿಸಿಪಿ ಮಾತನಾಡಿದರು.
ಮತ್ತೆ ಕೃಷಿ ಖಾತೆ ಕೊಟ್ಟರೂ ಸಂತೋಷ.ಇಲಾಖೆಯಲ್ಲಿ ಈಗಾಗಲೇ ಹಲವು ಪ್ರಗತಿಪರ ರೈತಪರ ಕೆಲಸಗಳನ್ನು ಮಾಡಿದ್ದು,ಇನ್ನೊಂದಿಷ್ಟು ಸಾಧನೆ ಮಾಡಬೇಕಿದೆ.ಅದೇನೇ ಇರಲಿ ಯಾವುದೇ ಖಾತೆ ಕೊಟ್ಟರೂ ಶ್ರದ್ಧೆನಿಷ್ಠೆಯಿಂದ ನಿಭಾಯಿಸುತ್ತೇನೆಂಬ ಭರವಸೆಯಿದೆ.ಸದ್ಯಕ್ಕಿನ್ನೂ ಇಂತಹದ್ದೇ ಖಾತೆ ಎಂದು ನಿಕ್ಕಿಯಾಗಿಲ್ಲ.ಯಾವುದೇ ಇಲಾಖೆ ಕೊಟ್ಟರೂ ಪ್ರಗತಿಪರವಾಗಿ ಮಾಡುತ್ತೇನೆಂದರು.
ಹಾವೇರಿ ಜಿಲ್ಲೆಯ ಮೇಲ್ಮನೆ ಸದಸ್ಯ ಆರ್.ಶಂಕರ್‌ಗೆ ಸಚಿವಸ್ಥಾನ ನೀಡದ ಬಗ್ಗೆ ಯಾವುದೇ ಬೇಸರವಿಲ್ಲ.ಅದರಂತೆ ಪಕ್ಷದಲ್ಲಿ ಯಾವುದೇ ಅಸಮಾಧಾನವೂ ಇಲ್ಲ.ಏನೇಯಿದ್ದರೂ ವರಿಷ್ಠರು ಅದೆಲ್ಲವನ್ನೂ ಸರಿಪಡಿಸುತ್ತಾರೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿಸಿಪಿ ಉತ್ತರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..