ದೊಡ್ಡಬಳ್ಳಾಪುರ: ತಾಲೂಕಿನ ವಿವಿಧಡೆಗಳಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.
ಲಸಿಕಾ ಕೇಂದ್ರಗಳಲ್ಲಿ ಜಾಗೃತಿ ಬ್ಯಾನರ್ ಅಳವಡಿಸಿ, ಲಸಿಕೆ ಪಡೆದವರಿಗೆ ಸಿಹಿ ವಿತರಣೆ: ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಕಾರಿಗಳ ಸೂಚನೆಯ ಮೇರೆಗೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕು ಆಸ್ಪತ್ರೆಗಳ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆಯುವ ಬಗ್ಗೆ ಜಾಗೃತಿ ಸಂದೇಶದ ಬ್ಯಾನರ್ ಅನ್ನು ಅಳವಡಿಸಿ, ಲಸಿಕೆ ಪಡೆದ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.
ನಗರದ ಆಯುಷ್ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್ ಲಸಿಕೆ ಪಡೆದವರಿಗೆ ಸಿಹಿ ವಿತರಿಸಿ, ದೇಶದ ಸದೃಢತೆಗೆ ಆರೋಗ್ಯದ ಪಾತ್ರ ಮಹತ್ವದ್ದಾಗಿದ್ದು, ಅರ್ಹ ಎಲ್ಲರೂ ಲಸಿಕೆ ಪಡೆಯುವ ಮೂಲಕ ಆರೋಗ್ಯವಂತರಾಗಬೇಕಿದೆ ಎಂದರು.
ಲಸಿಕಾ ಕೇಂದ್ರದ ಮುಖ್ಯಸ್ಥ ಡಾ.ಹರಿ ಪ್ರಸಾದ್ ಮತ್ತಿತರರು ಹಾಜರಿದ್ದರು.
ನಗರದ ಕುಚ್ಚಪ್ಪನಪೇಟೆಯಲ್ಲಿ ಅರಿವು ಮಿತ್ರವೃಂದದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ರಂಗ ಕಲಾವಿದ ಕೆ.ಸಿ.ನಾರಾಯಣ್, ಪೇಟೆಯ ಹಿರಿಯರಾದ ಕೆ.ಎಲ್.ದೇವರಾಜು ಧ್ವಜಾರೋಹಣ ನೆರವೇರಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಅರಿವು ಮಿತ್ರವೃಂದದ ಪಿ.ಆರ್.ರಮೇಶ್ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ವತಿಯಿಂದ 75ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಪಂ ಅಧ್ಯಕ್ಷ ರಾಮಕೃಣ್ಣಯ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ರಾಮಣ್ಣ, ಆರ್.ಶಿವಕುಮಾರ್, ಆರ್ ಪ್ರಕಾಶ್, ತೋಪಯ್ಯ. ರಮೇಶ್, ಮುಭರಾಕ್ ಬೇಗಂ, ಚಿಕ್ಕರಾಮಣ್ಣ, ಗಂಗಾಧರಯ್ಯ, ರುದ್ರೇಶ್, ಭಾಗ್ಯಮ್ಮ, ಕಲಾವತಿ ಮತ್ತಿತರಿದ್ದರು
ನಗರದ ಸ್ವಾಮಿ ವಿವೇಕಾನಂದ ಘಟಕದವತಿಯಿಂದ ಸ್ವಾತಂತ್ರ್ಯೋತ್ವವನ್ನು ಸರಳವಾಗಿ ಆಚರಿಸಲಾಯಿತು.
ಘಟಕದ ಸಂಚಾಲಕ ಉಮೇಶ್, ಸದಸ್ಯರಾದ ಮಂಜುನಾಥ್, ಕುಶಾಲ್, ಸುರೇಶ್ ಮತ್ತಿತರರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..