ದೊಡ್ಡಬಳ್ಳಾಪುರ: ನಗರದ ಬಸವ ಭವನದ ಸಮೀಪದ ಖಾಸಗಿ ಪಾರ್ಟಿ ಹಾಲ್ ನಲ್ಲಿ ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಿಸಿದ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ತಾಲೂಕು ಪೊಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದಿಂದ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಕೋವಿಡ್ ಸೋಂಕು ತಡೆಗಟ್ಟಲು ಘೋಷಿಸಲಾದ ಲಾಕ್ಡೌನ್ ಬಡ ಜನರ ಬದುಕನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಲಾದ ಅನ್ನದಾಸೋಹ, ಪಡಿತರ ಕಿಟ್ ವಿತರಣೆಗೆ ದಾನಿಗಳು ಬಹಳಷ್ಟು ನೆರವನ್ನು ನೀಡಿ ತಾಲೂಕಿನ ಜನತೆಗೆ ನೆರವಾಗಲು ಕೈ ಜೋಡಿಸಿದ್ದಾರೆ ಎಂದು ಸ್ಮರಿಸಿದರು.
ಕೋವಿಡ್ ಸಂಕಷ್ಟದ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ನೆರವನ್ನು ನೀಡುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಿರ್ಮಿಸಲಾದ ತಾಯಿ ಮಗು ಆಸ್ಪತ್ರೆ, ವಸತಿ ಶಾಲೆಗಳು ಸೋಂಕಿತರ ಚಿಕಿತ್ಸೆಗೆ ವರದಾನವಾಯಿತು. ಮೂರನೇ ಅಲೆಯ ಆತಂಕದಿಂದ ಚಿಕಿತ್ಸೆಗೆ ಅನೂಕೂಲವನ್ನಾಗಿಸಲು ಉಸ್ತುವಾರಿ ಸಚಿವರಾಗಿದ್ದ ಆರ್.ಅಶೋಕ್ ಅವರಿಗೆ ಮನವಿ ಮಾಡಿ ಮೇಕ್ ಶಿಪ್ಟ್ ನಿರ್ಮಿಸಲಾಗಿದ್ದು, ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದರು.
ಕೋವಿಡ್ ಸಂಕಷ್ಟದಲ್ಲಿರುವ ತಾಲೂಕಿನ ಜನತೆಗೆ ಅನುಕೂಲವಾಗಲು ಹಲವು ಸುತ್ತಿನ ದಿನಸಿ ಕಿಟ್ ವಿತರಿಸಲಾಗಿದೆ.ಮುಂದಿನ ಹಂತವಾಗಿ ಆಗಸ್ಟ್ 19ರಂದು ತಾಲೂಕಿನ ದೊಡ್ಡಬೆಳವಂಗಲದಲ್ಲಿ 11 ಗಂಟೆಗೆ ಮಧುರೆ, ಸಾಸಲು, ದೊಡ್ಡಬೆಳವಂಗಲ ವ್ಯಾಪ್ತಿಯವರಿಗೆ ಹಾಗೂ ಮಧ್ಯಾಹ್ನ 02 ಗಂಟೆಗೆ ಕೊನಘಟ್ಟದಲ್ಲಿ ನಗರಸಭೆ, ಕಸಬಾ ಹಾಗೂ ತೂಬಗೆರೆ ಹೋಬಳಿಯ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಪಡಿತರ ಕಿಟ್ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಛಾಯಾಗ್ರಾಹಕ ಮಿತ್ರರು ತಾಲೂಕಿನಲ್ಲಿರುವ ವಸತಿ ನಿಲಯಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒಳಗೊಂಡ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ತಮ್ಮ ಮಕ್ಕಳನ್ನು ಸೇರಿಸಿ ಸುಶಿಕ್ಷಿತರನ್ನಾಗಿಸಬೇಕಿದೆ.
ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನ್ನಾಥ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಕೋವಿಡ್ ಬಳಷ್ಟು ಜನರಿಗೆ ತೊಂದರೆಯನ್ನು ಉಂಟುಮಾಡಿದೆ. ಈ ನಿಟ್ಟಿನಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅವರು ಕೋವಿಡ್ ಚಿಕಿತ್ಸೆಯಿಂದ ಹಿಡಿದು, ಅನ್ನ ದಾಸೋಹ ಸೇರಿದಂತೆ ಪಡಿತರ ಕಿಟ್ ವಿತರಿಸುವ ಮೂಲಕ ಅವರ ಸೇವೆ ಅಪಾರವಾಗಿದೆ ಎಂದರು.
ಸಂಘದ ಅಧ್ಯಕ್ಷ ಅಶ್ವಥ್ ಮಾತನಾಡಿ, ಛಾಯಾಗ್ರಾಹಕರು ಎಲ್ಲರ ಮುಖದಲ್ಲಿ ಸ್ಮೈಲ್ ಪ್ಲೀಸ್ ಎನ್ನುವವರ ಬದುಕನ್ನು ಕರೊನಾ ಸ್ಮೈಲ್ ಕಿತ್ತುಹಾಕಿದೆ. ಈ ಕುರಿತು ಶಾಸಕರ ಗಮನಕ್ಕೆ ತಂದಾಗ ಕೂಡಲೆ ಸ್ಪಂದಿಸಿ 200 ದಿನಸಿ ಕಿಟ್ ನೀಡುವುದಾಗಿ ಸ್ಪಂದಿಸಿದ್ದಾರೆ. ನಮ್ಮ ಛಾಯಾಗ್ರಹಕರು ಸಂಘ ಸ್ವಂತ ಕಟ್ಟವಿಲ್ಲದೆ ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಶಾಸಕರು ನಗರಸಭೆ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ದೊರಕಿಸುವಂತೆ ಮನವಿ ಮಾಡಿದರು.
ಈ ವೇಳೆ ಸುಮಾರು 200 ಮಂದಿಗೆ ದಿನಸಿ ಕಿಟ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ಬೀಡಿಕೆರೆ ರವಿಕುಮಾರ್, ಕಾರ್ಯಾಧ್ಯಕ್ಷ ರೇಣುಕಪ್ಪ, ಮುಖಂಡರಾದ ಆಂಜಿನಪ್ಪ, ಸೋಮರುದ್ರ ಶರ್ಮ, ಹೇಮಂತರಾಜು, ಆಂಜನಮೂರ್ತಿ, ಟಿ.ರಾಮಣ್ಣ, ಪು.ಮಹೇಶ್, ಅಖಿಲೇಶ್, ಶ್ರೀನಗರ ಬಶೀರ್, ಕುಮುದಾ, ನಾಗರತ್ನಮ್ಮ, ನಾಗಲಕ್ಷ್ಮಿ, ರಾಜ್ ಕುಮಾರ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..