ದೊಡ್ಡಬಳ್ಳಾಪುರ: ನಿಜವಾದ ತಾಲಿಬಾನಿಗಳು ಆರ್‌ಎಸ್‌ಎಸ್‌ನವರು ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆರ್.ಧ್ರುವನಾರಾಯಣ್ ಹೇಳಿಕೆಯಿಂದ ಸಂಘದ ಸ್ವಯಂ ಸೇವಕರಿಗೆ ಹಾಗೂ ಕಾರ್ಯಕರ್ತರಿಗೆ ಮಾನಸಿಕ ನೋವುಂಟಾಗಿದ್ದು, ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರ್‌ಎಸ್‌ಎಸ್ ವಿರುದ್ಧ ನೀಡಿರುವ ಹೇಳಿಕೆ ಅಸಂಬದ್ದವಾಗಿದೆ. ತಾಲಿಬಾನಿ ನಂಟು ಹಾಗೂ ಸಂಪರ್ಕ ಇರುವವರಿಗೆ ಮಾತ್ರ ಇಂತಹ ಹೇಳಿಕೆಗಳನ್ನು ನೀಡಲು ಸಾಧ್ಯ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗರಾಜು ಆಕ್ರೋಶ ವ್ಯಕ್ತಪಡಿಸಿದರೆ.
ಆರ್.ಧ್ರುವನಾರಾಯಣ್ ಅವರಿಗೆ ಇಟಲಿಯವರೊಂದಿಗೆ ನಂಟು ಇರುವ ಕಾರಣದಿಂದಾಗಿ ಇವರು ಸೋನಿಯಾ ಗಾಂಧಿಯನ್ನು ಮೆಚ್ಚಿಸಲು ದೇಶದ ನಿಜವಾದ ಸ್ವಯಂ ಸೇವಕ ಸಂಸ್ಥೆ ಆರ್‌ಎಸ್‌ಎಸ್ ವಿರುದ್ದ ಇಲ್ಲ ಸಲ್ಲದ ಹೇಳಿಕೆ ನೀಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಲೋಕೇಶ್ ನಾಗಸಂದ್ರ ಆರೋಪಿಸಿದರು
ಈ ವೇಳೆ ಯುವಮೋರ್ಚ ಅಧ್ಯಕ್ಷ ಕಿರಣ್, ಪ್ರಧಾನ ಕಾರ್ಯದರ್ಶಿ ಚಂದನ್. ಜಿಲ್ಲಾ ಕಾರ್ಯಕಾರಣಿ ಸದಸ್ಯ ಅಜಯ್, ಕಾರ್ಯದರ್ಶಿ ಯಶವಂತ್, ಚಂದ್ರು. ಉಪಾದ್ಯಕ್ಷ ನರೇಶ್. ವೆಂಕಟರಾಜು, ಗೋಪಾಲ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……