ದೊಡ್ಡಬಳ್ಳಾಪುರ: ವಿದ್ಯಾ ಸೇತು ಯೋಜನೆಯಡಿ ರೋಟರಿ ಬೆಂಗಳೂರು ಪಶ್ಚಿಮ, ರೋಟರಾಕ್ಟ್ ಬೆಂಗಳೂರು ಪಶ್ಚಿಮ ಅವರ ವತಿಯಿಂದ ನಗರದ ಸರ್ಕಾರಿ ಪ್ರೌಢ ಶಾಲೆಯ 50 ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರೋಟರಾಕ್ಟ್ ಬೆಂಗಳೂರು ಪಶ್ಚಿಮ ಅಧ್ಯಕ್ಷೆ ದಿಯಾ, ಎಸ್.ಎಸ್.ಲ್.ಸಿ ನಂತರ ಶೈಕ್ಷಣಿಕ ಜೀವನದ ಆಯ್ಕೆ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಉಪ ಪ್ರಾಂಶುಪಾಲರಾದ ಕ.ವೆಂಕಟೇಶ್ ರೆಡ್ಡಿ, ಮುಖ್ಯ ಉಪನ್ಯಾಸಕ ಮಂಜುನಾಥ್ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸುಚೇತನ ಎಜುಕೇಶನ್ ಹಾಗೂ ಚಾರಿಟಬಲ್ ಟ್ರಸ್ಟ್ ನ ಮಂಜುನಾಥ್ ನಾಗ್ ರವರ ಸಹ ಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಎನ್.ಸಿ.ಸಿ ಅಧಿಕಾರಿ ಅಶ್ವಿನಿ, ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಲಿಂಗಯ್ಯ, ರೋಟರಾಕ್ಟ್ ಬೆಂಗಳೂರು ಪಶ್ಚಿಮದ ಕಾರ್ಯದರ್ಶಿ ಸಹನ, ಸಮುದಾಯ ಸೇವೆ ನಿರ್ದೇಶಕ ಚಿರಾಗ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..