ಯಲಹಂಕ: ಕಾಲೇಜು ಅಭಿವೃದ್ದಿ ಸಮಿತಿಯು, ಶಿಕ್ಷಣದ ಮೂಲ ಸೌಕರ್ಯ, ಕಲಿಯುವ ಕ್ರಮಗಳ ಸುಧಾರಣೆಗಾಗಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ನೂತನ ಸರ್ಕಾರಿ ಕಾಲೇಜಿಗೆ 279 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ ಎಂದು ರಾಜಾನುಕುಂಟೆ ಸರ್ಕಾರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಈರೇಗೌಡ.ಜಿ.ಬಿ. ತಿಳಿಸಿದರು.
ರಾಜಾನುಕುಂಟೆ ಸರ್ಕಾರಿ ಕಾಲೇಜಿನಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ ಅವರು ಮಾತನಾಡಿದರು.
ನಿಸ್ವಾರ್ಥದಿಂದ ದುಡಿಯುವ ಬದ್ದತೆಯುಳ್ಳ ಶಿಕ್ಷಣಾಸಕ್ತರ ಸಮೂಹದ ಕಾಲೇಜು ಅಭಿವೃದ್ದಿ ಮಂಡಳಿಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಪ್ರಥಮ ದ್ವಿತಿಯ ಪಿಯು ತರಗತಿಗಳಿಗೆ ಉಚಿತ ಪ್ರವೇಶ, ಉಚಿತ ಸಮವಸ್ತ್ರ, ಪುಸ್ತಕ ಎಲ್ಲರಿಗೂ ಲ್ಯಾಪ್ ಟ್ಯಾಪ್ ಜೊತೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ನೀಟ್, ಜೆಇಇ ತರಗತಿಗಳನ್ನು ನಡೆಸಲು ಮುಂದಾಗಿರುವುದು ಗ್ರಂಥಾಲಯ, ಅಗತ್ಯ ಉತ್ತಮ ಪ್ರಾಥ್ಯಾಪಕರಿಗೆ ಶಾಲಾ ಆಡಳಿತ ಮಂಡಳಿಯೇ ವಹಿಸಿಕೊಂಡಿರುವುದು ಅರಿತ ವಿದ್ಯಾರ್ಥಿಗಳು ಈ ವರ್ಷ 295ಕ್ಕೂ ಹೆಚ್ಚು ನೊಂದಣೆಯಾಗಿದ್ದು ಶೇ 70 ಹೆಣ್ಣು ಮಕ್ಕಳು ಕೇಲೇಜಿಗೆ ಸೇರ್ಪಡೆಯಾಗಿರುವುದು ವಿಶೇಷ ಎಂದರು.
ದೊಡ್ಡಬಳ್ಳಾಪುರ ಅಭಿವೃದಿ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ ಮಾತನಾಡಿ, ಶಾಲೆಗಳು ಮತ್ತು ಸಮುದಾಯಗಳ ಸೇತುವೆ ಶಾಲಾನಿರ್ವಹಣಾ ಸಮಿತಿ ಕಾಗದದ ಮೇಲೆ ಉಳಿದಿದ್ದ ಈ ಪರಿಕಲ್ಪನೆಯನ್ನು ರಾಜಾನುಕುಂಟೆ ಕಾಲೇಜು ಅಭಿವೃದ್ದಿ ಸಮಿತಿಯ ನಿಜ ಅರ್ಥದಲ್ಲಿ ಕಾರ್ಯರೂಪಕ್ಕೆ ಇಳಿಸಿದೆ ಎಂದರು.
ಈ ವೇಳೆ ಕಾಲೇಜು ಅಭಿವೃದ್ದಿ ಮಂಡಳಿಯ ರಾಜೇಂದ್ರಕುಮಾರ್, ಮೊಹನ್ಇಟಕಲ್ಪುರ, ಮಂಜುನಾಥ್, ತಿಮ್ಮಾರೆಡ್ಡಿ ಸೊಮಶೇಖರೆಡ್ಡಿ, ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ, ಮುಖಂಡರಾದ ಸಾದೇನಹಳ್ಳಿ ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..