ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಅಧಿಕೃತ ಫಲಿತಾಂಶ ಪ್ರಕಟ: ಅಬ್ಬರಿಸಿದ ಬಿಜೆಪಿ / ಮುಗ್ಗರಿಸಿದ ಕಾಂಗ್ರೆಸ್ / ಸ್ಥಾನಗಳ ಕಳೆದುಕೊಂಡ ಜೆಡಿಎಸ್ ಕಿಂಗ್ ಮೇಕರ್

ದೊಡ್ಡಬಳ್ಳಾಪುರ: ಸೆಪ್ಟೆಂಬರ್ 3 ರಂದು ನಡೆದಿದ್ದ ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡ್ ಗಳ ಚುನಾವಣೆ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ.

ಇಂದು ಬೆಳಗ್ಗೆ 8 ಗಂಟೆಗೆ ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ಎಸ್.ಶಿವರಾಜ್ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದ ಮತಯಂತ್ರಗಳ ಕೊಠಡಿಯನ್ನು ತೆರೆದು ಮತ ಎಣಿಕೆ ಮಾಡಲಾಯಿತು.

ಫಲಿತಾಂಶ: ಬಿಜೆಪಿ – 12, ಕಾಂಗ್ರೆಸ್ – 09, ಜೆಡಿಎಸ್ – 07 ಹಾಗೂ ಪಕ್ಷೇತರರು 3 ಸ್ಥಾನ ಪಡೆದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ವಿಜಯೋತ್ಸವಕ್ಕೆ ನಿಷೇಧಿಸಿದ್ದರು, ಚುನಾಯಿತರು ಹಾಗೂ ಬೆಂಬಲಿಗರ ಸಂಭ್ರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.

ವಾರ್ಡ್ ವಾರು ಚುನಾಯಿತರ ವಿವರ:

  • 1.ಆಶ್ರಯ ಬಡಾವಣೆ – ಹಂಸಪ್ರಿಯ.ಆರ್. (ಬಿಜೆಪಿ),
  • 2. ಬಸವೇಶ್ವರ ನಗರ – ಎನ್.ಪದ್ಮನಾಭ (ಬಿಜೆಪಿ),
  • 3.ಮುತ್ಸಂದ್ರ – ಸುಮಿತ್ರಾ ಆನಂದ್ (ಬಿಜೆಪಿ),
  • 4.ವಿನಾಯಕನಗರ ನಾಗರತ್ನಮ್ಮ (ಬಜೆಪಿ),
  • 5.ಸಿದ್ದೇನಾಯಕನಹಳ್ಳಿ – ಇಂದ್ರಾಣಿ.ವಿ (ಪಕ್ಷೇತರ),
  • 6.ಮುತ್ತೂರು – ಮುನಿರಾಜು. ಎಂ (ಪಕ್ಷೇತರ),
  • 7.ಶ್ರೀನಗರ – ಎಂ.ಮಲ್ಲೇಶ್ (ಜೆಡಿಎಸ್),
  • 8.ಖಾಸ್ ಬಾಗ್ ( ದರ್ಗಾಪುರ) – ವಿ.ನಾಗರಾಜ್ (ಕಾಂಗ್ರೆಸ್),
  • 9. ಸಂಜಯನಗರ – ಸುಧಾ ಲಕ್ಷ್ಮೀನಾರಾಯಣ (ಬಿಜೆಪಿ),
  • 10.ವಿದ್ಯಾನಗರ – ಎಸ್.ನಾಗವೇಣಿ (ಕಾಂಗ್ರೆಸ್),
  • 11.ಕರೇನಹಳ್ಳಿ 1 – ಚಂದ್ರಮೋಹನ್.ಎಚ್ (ಕಾಂಗ್ರೆಸ್),
  • 12‌.ಕನಕದಾಸನಗರ – ಶಿವರಾಜ್ (ಬಿಜೆಪಿ),
  • 13.ಭುವನೇಶ್ವರಿ ನಗರ –  ವೆಂಕಟೇಶ್ (ಬಿಜೆಪಿ),
  • 14.ನೇಯ್ಗೆಬೀದಿ – ಎಂ.ಜಿ.ಶ್ರೀನಿವಾಸ್ (ಕಾಂಗ್ರೆಸ್),
  • 15. ತೂಬಗೆರೆ ಪೇಟೆ – ಆರ್.ಲಕ್ಷ್ಮೀಪತಿ ಬಿಜೆಪಿ,
  • 16.ಗಾಂಧಿನಗರ – ಟಿ.ಎನ್.ಪ್ರಭುದೇವ (ಜೆಡಿಎಸ್),
  • 17.ಕುಚ್ಚಪ್ಪನ ಪೇಟೆ –  ವತ್ಸಲ.ಎಸ್ (ಬಿಜೆಪಿ),
  • 18. ವೀರಭದ್ರನಪಾಳ್ಯ (ಕಲ್ಲುಪೇಟೆ) – ಆರ್.ಶಿವಣ್ಣ (ಬಿಜೆಪಿ),
  • 19.ದೇವರಾಜ ನಗರ – ಎಚ್.ಎಸ್.ಶಿವಶಂಕರ್ (ಬಿಜೆಪಿ),
  • 20.ತ್ಯಾಗರಾಜನಗರ – ಸುರೇಶ್ (ಪಕ್ಷೇತರ),
  • 21.ಹೇಮಾವತಿಪೇಟೆ – ಎಸ್.ಎ .ಬಾಸ್ಕರ್ (ಬಿಜೆಪಿ),
  • 22.ಚಿಕ್ಕಪೇಟೆ – ಅಲ್ತಾಪ್ ಅಬ್ದುಲ್ ಹಮೀದ್ (ಕಾಂಗ್ರೆಸ್),
  • 23. ಗಾಣಿಗರಪೇಟೆ – ಕೆ.ಮಂಜುಳ,
  • 24.ಎಲೇಪೇಟೆ – ಆನಂದ್ (ಕಾಂಗ್ರೆಸ್),
  • 25.ಮಾರುತಿನಗರ – ಆದಿಲಕ್ಷ್ಮೀ (ಜೆಡಿಎಸ್),
  • 26.ರೋಜಿಪುರ (ಗಂಗಾಧರಪುರ) – ಎಂ.ರಂಜನಿ (ಕಾಂಗ್ರೆಸ್),
  • 27.ಸೋಮೇಶ್ವರ ಬಡಾವಣೆ – ರವಿಕುಮಾರ್.ವಿ.ಎಸ್ (ಜೆಡಿಎಸ್),
  • 28.ಕಛೇರಿ ಪಾಳ್ಯ – ರೂಪಿಣಿ (ಕಾಂಗ್ರೆಸ್),
  • 29.ಶಾಂತಿನಗರ – ಫರ್ಹಾನಾ ತಾಜ್ (ಜೆಡಿಎಸ್),
  • 30.ಇಸ್ಲಾಂಪುರ – ಹಸೀನಾ ತಾಜ್ (ಜೆಡಿಎಸ್),
  • 31.ಕರೇನಹಳ್ಳಿ 2 – ಆರ್.ಪ್ರಭಾ (ಜೆಡಿಎಸ್).

ಸೋತ ಪ್ರಮುಖರು: ಕಾಂಗ್ರೆಸ್ ನಗರ ಅಧ್ಯಕ್ಷ ಕೆ.ಪಿ.ಜಗನಾಥ್, ನಗರಸಭೆ ಮಾಜಿ ಅದ್ಯಕ್ಷ ಮುದ್ದಪ್ಪ,  ಸದಸ್ಯರಾದ ಕೆಂಪರಾಜ್, ಶಿವಕುಮಾರ್, ಸುಶೀಲರಾಘವ, ಬಿಜೆಪಿ ಜಿಲ್ಲಾವಕ್ತಾರರಾದ ಪುಷ್ಪಾಶಿವಶಂಕರ್, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ಕಾಂಗ್ರೆಸ್ ಹಿರಿಯ‌ ಮುಖಂಡ ಸೋಮರುದ್ರ ಶರ್ಮ, ಕನ್ನಡ ಪಕ್ಷದ ಡಿ.ಪಿ.ಆಂಜನೇಯ ಸೋಲನಪ್ಪಿದ್ದಾರೆ.

ಹ್ಯಾಟ್ರಿಕ್ ಬಾರಿಸಿದ ರವಿಕುಮಾರ್: ಸೋಮೇಶ್ವರ ಬಡಾವಣೆಯಲ್ಲಿ ಜೆಡಿಎಸ್ ನಗರದ ಘಟಕದ ಅಧ್ಯಕ್ಷ ರವಿಕುಮಾರ್.ವಿ.ಎಸ್ ಸತತ ಮೂರು ಚುನಾವಣೆಯಲ್ಲಿ ಚುನಾಯಿತಾರಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.

2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ.06, ಜೆಡಿಎಸ್ 14, ಕಾಂಗ್ರೆಸ್ 05, ಕನ್ನಡ ಪಕ್ಷ 02 ಹಾಗೂ 05ಮಂದಿ‌ ಪಕ್ಷೇತರರು ಚುನಾಯಿತರಾಗಿದ್ದರು. ಇದರ ಅನ್ವಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮತಗಳಿಕೆ ಹೆಚ್ಚಾಗಿದ್ದರೆ, ಜೆಡಿಎಸ್ ಕುಸಿದಿದ್ದರೂ ಮೈತ್ರಿಗೆ ಅನಿವಾರ್ಯವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಚನ್ನರಾಯಪಟ್ಟಣ ರೈತ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ಚನ್ನರಾಯಪಟ್ಟಣ ರೈತ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸಭೆ ನಡೆಸಿದ Cmsiddaramaiah

[ccc_my_favorite_select_button post_id="110536"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಆನ್ ಲೈನ್ ಗೇಮ್ ಆಡಿ 18 ಲಕ್ಷ ಕಳೆದುಕೊಂಡ ಯುವಕ.. ಆತ್ಮಹತ್ಯೆ!

ಆನ್ ಲೈನ್ ಗೇಮ್ ಆಡಿ 18 ಲಕ್ಷ ಕಳೆದುಕೊಂಡ ಯುವಕ.. ಆತ್ಮಹತ್ಯೆ!

ಆನ್ ಲೈನ್ ಗೇಮ್ ಆಡಿ ಬರೋಬ್ಬರಿ 18 ಲಕ್ಷ ರೂ.ಹಣ ಕಳೆದುಕೊಂಡ ಯುವಕನೋರ್ವ ಸೆಲ್ಪಿ ವೀಡಿಯೊ ಮಾಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ..

[ccc_my_favorite_select_button post_id="110524"]
ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ದೊಡ್ಡಬಳ್ಳಾಪುರ: ವಿದ್ಯುತ್ ತಂತಿ ಬಿದ್ದು ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರ..!

ವಿದ್ಯುತ್ ತಂತಿಬಿದ್ದು ಇಬ್ಬರು ಕಾರ್ಮಿಕರು (laborer) ಗಂಭೀರವಾಗಿ ಗಾಯಗೊಂಡರುವ ಘಟನೆ ಕರೇನಹಳ್ಳಿಯಲ್ಲಿ ಮಂಗಳವಾರ ಮದ್ಯಾಹ್ನ ನಡೆದಿದೆ.

[ccc_my_favorite_select_button post_id="110354"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!