ದೊಡ್ಡಬಳ್ಳಾಪುರ: ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ, ಹೊಟೇಲ್ ನಿಂದ ತರಲಾಗಿದ್ದ ಊಟ ಮಾಡಿದ ಕಾರಣ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ, ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಸಂಕರಸನಹಳ್ಳಿಯಲ್ಲಿ ಸಂಭವಿಸಿದೆ.
ಕೊರಟಗೆರೆ ತಾಲೂಕಿನ ಎಂ.ಗೊಲ್ಲಹಳ್ಳಿ ಮೂಲದ ಕಾರ್ಮಿಕರು ಇಂದು ಬೆಳಗ್ಗೆ ಹೂವನ್ನು ಕೀಳಲು ಸಕ್ಕರೆಗೊಲ್ಲಹಳ್ಳಿ ಸಮೀಪದ ಸಂಕರಸನಹಳ್ಳಿಯ ರೈತನೋರ್ವನ ಜಮೀನಿಗೆ ಬಂದಿದ್ದು, ಈ ವೇಳೆ ರೈತ ದೊಡ್ಡಬೆಳವಂಗಲದ ಕಡೆಯ ಹೋಟೆಲ್ ನಿಂದ ಮಧ್ಯಾಹ್ನದ ಊಟ ತಂದುಕೊಟ್ಟಿದ್ದು, ಊಟ ತಿಂದ 5 ಮಂದಿಗೆ ವಾಂತಿ ಮತೈದು ಮಂದಿಗೆ ತಲೆ ಸುತ್ತು ಕಾಣಿಸಿಕೊಂಡು, ಕೊನೇನಹಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗೆ ದೊಡ್ಡಬಳ್ಳಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಇದರ ಬೆನ್ನಲ್ಲೆ ಮತ್ತೈದು ಮಂದಿಗೆ ಆರೋಗ್ಯ ಏರು ಪೇರಾಗಿದ್ದು ಊಟ ಮಾಡಿದ ಒಟ್ಟು 15 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 5 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಆದರೆ ಸಂಕರಸನಹಳ್ಳಿಯ ರೈತನ ಮಾಹಿತಿ ಪತ್ತೆಯಾಗದ ಕಾರಣ, ದೊಡ್ಡಬೆಳವಂಗಲ ವ್ಯಾಪ್ತಿಯ ಯಾವ ಹೋಟಲ್ ನಿಂದ ಊಟ ತಂದು ಕಾರ್ಮಿಕರಿಗೆ ನೀಡಿದ ಎಂಬ ಕುರಿತು ಮಾಹಿತಿ ದೊರಕಿಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..