ಬೆಂ.ಗ್ರಾ.ಜಿಲ್ಲೆ: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ರಾತ್ರೋರಾತ್ರಿ ಯಾವುದೇ ನೋಟಿಸ್ ನೀಡದೆ ದೇಗುಲ ನೆಲಸಮ ಮಾಡಿದ್ದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದು, ಮೈಸೂರು ಜಿಲ್ಲಾಡಳಿತದ ಈ ಕ್ರಮಕ್ಕೆ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 42 ಹಿಂದೂ ದೇವಸ್ಥಾನ ಹಾಗೂ 1 ಚರ್ಚ್ ಅನಧಿಕೃತವಾಗಿ ನಿರ್ಮಾಣವಾಗಿದೆ ಎನ್ನಲಾದ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದು ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜಿಲಾಢಳಿತ ಮಾಡಲಾಗಿರುವ ಪಟ್ಟಿ ಎನ್ನಲಾಗುತ್ತಿರುವ, ಜಿಲ್ಲೆಯಲ್ಲಿ ತೆರವು ಮಾಡಲು ಬಾಕಿ ಇರುವ ಅನಧಿಕೃತವಾಗಿ ನಿರ್ಮಾಣವಾಗಿರುವ ದೇವಸ್ಥಾನ ಮತ್ತು ಚರ್ಚ್ ಒಂದರ ಪಟ್ಟಿ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ವೈರಲ್ ಆಗುತ್ತಿದೆ.
ಪಟ್ಟಿಯನ್ವಯ ದೇವನಹಳ್ಳಿ 06, ದೊಡ್ಡಬಳ್ಳಾಪುರ ತಾಲೂಕಿನ 07, ಹೊಸಕೋಟೆ ತಾಲೂಕಿನ 24 ದೇವಾಲಯ ಮತ್ತು 01 ಚರ್ಚ್ ಹಾಗೂ ನೆಲಮಂಗಲ ತಾಲೂಕಿನ 05 ದೇವಲಯ ಪಟ್ಟಿಯಲ್ಲಿದೆ.
ದೇವನಹಳ್ಳಿ ತಾಲೂಕಿನ:
- ವೆಂಕಟಗಿರಿಕೋಟೆ – ಆಂಜನೇಯ ಸ್ವಾಮಿ ದೇವಸ್ಥಾನ.
- ಬೈರಾಪುರ – ಆಂಜನೇಯ ಸ್ವಾಮಿ ದೇವಸ್ಥಾನ.
- ಚಿಕ್ಕತತ್ತಮಂಗಲ – ಆಂಜನೇಯ ಸ್ವಾಮಿ ದೇವಸ್ಥಾನ.
- ಬೀರಸಂದ್ರ – ಆಂಜನೇಯ ಸ್ವಾಮಿ ದೇವಸ್ಥಾನ.
- ಕುಂದಾಣ – ಓಂ ಶಕ್ತಿ ದೇವಸ್ಥಾನ ಹಾಗೂ ಜಲಗೇರಮ್ಮ ದೇವಸ್ಥಾನ.
ದೊಡ್ಡಬಳ್ಳಾಪುರ ತಾಲೂಕಿನ:
- ವೀರಭದ್ರನಪಾಳ್ಯ – ಶ್ರೀ ಗಣೇಶ ದೇವಸ್ಥಾನ.
- ಸಂಜಯ ನಗರ – ಶ್ರೀ ಶನಿಮಹಾತ್ಮ ದೇವಸ್ಥಾನ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ.
- ಶಾಂತಿನಗರ – ಶ್ರೀ ಬಸವೇಶ್ವರ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಅಶ್ವಥಕಟ್ಟೆ.
- ಕಂಚೇನಹಳ್ಳಿ – ಶ್ರೀ ಕುಕ್ಕಲಮ್ಮ ದೇವಸ್ಥಾನ.
- ಅಂತರಹಳ್ಳಿ – ವೀರಕೆಂಪಮ್ಮ ದೇವಸ್ಥಾನ.
ಹೊಸಕೋಟೆ ತಾಲೂಕಿನ:
- ಮಲ್ಲಸಂದ್ರ – ಏಳುಮಲ್ಲಮ್ಮ ಅಶ್ವಥಕಟ್ಟೆ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ, ಚರ್ಚ್, ಮುನೇಶ್ವರ ಸ್ವಾಮಿ ದೇವಸ್ಥಾನ.
- ಅಪ್ಪಾಜಿಪುರ – ಮುನೇಶ್ವರ ಸ್ವಾಮಿ ದೇವಸ್ಥಾನ.
- ನಡವತ್ತಿ – ಆಂಜನೇಯ ಸ್ವಾಮಿ ದೇವಸ್ಥಾನ.
- ದೊಡ್ಡಗಟ್ಟಿಗನಬ್ಬೆ – ಆಂಜನೇಯ ಸ್ವಾಮಿ ದೇವಸ್ಥಾನ.
- ಚಿಕ್ಕಗಟ್ಟಿಗನಬ್ಬೆ – ಆಂಜನೇಯ ಸ್ವಾಮಿ ದೇವಸ್ಥಾನ.
- ಹೊಸಕೋಟೆ – ಅಯ್ಯಪ್ಪ ಸ್ವಾಮಿ ದೇವಸ್ಥಾನ.
- ಕೆರೆಕೋಡಿ ಹತ್ತಿರ – ಆಂಜನೇಯ ಸ್ವಾಮಿ ದೇವಸ್ಥಾನ.
- ಅಂಬೇಡ್ಕರ್ ಕಾಲೋನಿ – ಮುತ್ತುಮಾರಮ್ಮ.
- ಪಂಪ್ ಹೌಸ್ ಹತ್ತಿರ – ಆಂಜನೇಯ ಸ್ವಾಮಿ ದೇವಸ್ಥಾನ.
- ಕಣ್ಣೂರಹಳ್ಳಿ – ಮುನೇಶ್ವರ ದೇವಸ್ಥಾನ.
- ಹಲಸನಹಳ್ಳಿ – ಆಂಜನೇಯ ಸ್ವಾಮಿ ದೇವಸ್ಥಾನ.
- ಕಲ್ಲಹಳ್ಳಿ – ಶಿರಡಿಸಾಯಿಬಾಬ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ದೊಡ್ಡಮ್ಮದೇವಿ, ಸಪಲಮ್ಮ.
- ನಾಗನಾಯ್ಕನಕೋಟೆ – ಆಂಜನೇಯ ಸ್ವಾಮಿ ದೇವಸ್ಥಾನ.
- ಗಣಗಲೂರು – ಆಂಜನೇಯ ಸ್ವಾಮಿ ದೇವಸ್ಥಾನ.
- ಮುತ್ತೂರು – ಮುನೇಶ್ವರ ದೇವಸ್ಥಾನ.
- ಅನಗೊಂಡನಹಳ್ಳಿ – ಓಂ ಶಕ್ತಿ ದೇವಸ್ಥಾನ.
- ಮಲ್ಲಾಪುರ ಗೇಟ್ – ಆಂಜನೇಯ ಸ್ವಾಮಿ ದೇವಸ್ಥಾನ.
- ಸೂಲಿಬೆಲೆ – ಆಂಜನೇಯ ಸ್ವಾಮಿ ದೇವಸ್ಥಾನ.
- ಭಕ್ತಿಗಾನಹಳ್ಳಿ – ಆಂಜನೇಯ ಸ್ವಾಮಿ ದೇವಸ್ಥಾನ.
ನೆಲಮಂಗಲ:
- ತಾವರೆಕೆರೆ – ಶ್ರೀ ಅಭಯಾಂಜನೇಯಸ್ವಾಮಿ ದೇವಸ್ಥಾನ.
- ಮಣ್ಣೆ – ಶ್ರೀ ಗಣಪತಿ ದೇವಸ್ಥಾನ ಮತ್ತು ಶ್ರೀ ಅಭಯಾಂಜನೇಯಸ್ವಾಮಿ ದೇವಸ್ಥಾನ.
- ಲೋಹಿತ್ ನಗರ – ಶ್ರೀ ಪಂಚ ಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಪಟ್ಟಿಯಲ್ಲಿದೆ.
ನಂಜನಗೂಡಿನ ಹಿಂದೂ ದೇವಾಲಯ ನೆಲಸಮ ಪ್ರಕರಣ ವಿರೋಧ ಹಾಗೂ ಸ್ವಪಕ್ಷೀಯರಿಂದಲೇ ಬಿಜೆಪಿ ಸರ್ಕಾರ ತೀವ್ರ ಆಕ್ರೋಶವನ್ನು ಎದುರಿಸುತ್ತಿದೆ. ಅಲ್ಲದೆ ಹಿಂದು ಪರ ಸಂಘಟನೆಗಳು ದೇವಲಯ ನೆಲಸಮಗೊಳಿಸಿದ ಮೊಘಲರ ಅಳ್ವಿಕೆ, ಬಿಜೆಪಿ ಸರ್ಕಾರದ ಆಳ್ವಿಕೆಯ ನಡುವೆ ವೆತ್ಯಾಸವಿಲ್ಲವೆಂದು ಬಹಿರಂಗವಾಗಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದರ ನಡುವೆಯೇ ಬೆಂಕಿಗೆ ತುಪ್ಪ ಸುರಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆರವು ಮಾಡಲು ಬಾಕಿ ಇರುವ ಅನಧಿಕೃತವಾಗಿ ನಿರ್ಮಾಣವಾಗಿರುವ ದೇವಸ್ಥಾನ ಮತ್ತು ಚರ್ಚ್ ಒಂದರ ಪಟ್ಟಿ ವೈರಲ್ ಆಗಿದ್ದು, ಇದು ಅಸಲಿ ಪಟ್ಟಿಯೋ ಅಥವಾ ನಕಲಿ ಪಟ್ಟಿಯೋ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..