
ದೊಡ್ಡಬಳ್ಳಾಪುರ: ನವೋದಯ ಚಾರಿಟೆಬಲ್ ಟ್ರಸ್ಟ್ ಮತ್ತು ಮಟ್ಟ ಮಹಾಲಕ್ಷ್ಮಮ್ಮ ವೆಂಕಟರಮಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಹಾಗೂ ಸುಬ್ರಹ್ಮಣ್ಯೇಶ್ವರ ಮೆಡಿಕಲ್ ಸ್ಟೋರ್ ಸಂಯಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ತೂಬಗೆರೆಯಲ್ಲಿ ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಆತ್ರೆಯ ಆಯುರ್ವೇದ ಆಸ್ಪತ್ರೆ, ಡಾಕ್ಟರ್ಸ್ ಫಾರ್ ಯು ಸಂಸ್ಥೆ, ವಿ.ಜೆ.ಆರ್ ಡೆಂಟಲ್ ಕ್ಲಿನಿಕ್ ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ ಪಾಲ್ಗೊಂಡಿದ್ದವು.
ಶಿಬಿರದಲ್ಲಿ 290 ಜನರು ತಪಾಸಣೆಗೆ ಒಳಗಾಗಿದ್ದು, 40 ಜನ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆ ಆಗಿದರು.
ನವೋದಯ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ನವೋದಯ ಚೇತನ್ ಮಾತನಾಡಿ, ಈ ಶಿಬಿರವನ್ನು ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲೆಂದು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಇಂದ್ರಕುಮಾರ್, ಕಾರ್ಯಕ್ರಮ ಸಂಯೋಜಕ ಜನಾರ್ಧನ್, ಕಾನೂನು ಸಲಹೆಗಾರ ಮಂಜುನಾಥ್, ಖಜಾಂಚಿ ಚಂದ್ರಶೇಖರ್, ಸದಸ್ಯ ಕಾರ್ತಿಕ್ ಗೌಡ, ಮಟ್ಟ ಮಹಾಲಕ್ಷ್ಮಮ್ಮ ವೆಂಕಟರಮಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಶಕುಂತಲಮ್ಮ ಹಾಗೂ ಮಟ್ಟ ಸುನಿಲ್ ಮತ್ತಿತರಿದ್ದರು
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..
 
				 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						