ರೈತರ ಆದಾಯ ದ್ವಿಗುಣಗೊಳಿಸಲು ಉನ್ನತಮಟ್ಟದ ಸಮಿತಿ: ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು: 2023ರ ವೇಳೆಗೆ ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಬೆಂಗಳೂರಿನ‌ ಜಿಕೆವಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ಯತೆಯ ವಿಸ್ತರಣೆ ಹಾಗೂ ಜನಪ್ರಿಯತ ಕಾರ್ಯಕ್ರಮವನ್ನು ಅಳವಡಿಸಲು ಆರ್‌ಕೆವಿವೈ  ಯೋಜನೆಯಡಿ ರೂ 72‌34 ಕೋಟಿಗಳ ಅನುದಾನವನ್ನು ಒದಗಿಸಲಾಗಿದ್ದು ಮುಂಬರುವ 2 ವರ್ಷಗಳಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. 

ಕೃಷಿ ಮೂಲಭೂತಸೌಕರ್ಯ ನಿಧಿ ಯೋಜನೆಯಡಿಯಲ್ಲಿ ಕೋಯ್ಲೋತ್ತರ ನಿರ್ವಹಣೆಗಾಗಿ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಸಾಮೂಹಿಕ ಕೃಷಿ ಆಸ್ತಿಯನ್ನು ಸೃಷ್ಟಿಸಲು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಬಡ್ಡಿಗೆ ಶೇ.3 ಸಹಾಯಧನ ನೀಡಲಾಗುವುದು. ಈ ಸಂಬಂಧ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಫಲಾನುಭವಿಗಳು ಪ್ರಸ್ತಾವನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ( AIF ) ಪೋರ್ಟಲ್ ನಲ್ಲಿ ಅಪಲೋಡ್ ಮಾಡಬೇಕು ಅಥವಾ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಬಿಸಿಪಿ ವಿವರಿಸಿದರು.

ಕೃಷಿ ವಿಚಕ್ಷಣಾ ದಳದ ಮುಂದುವರೆದ ಜಫ್ತಿ: 2021 ಏಪ್ರಿಲ್ 1ರಿಂದ ಸೆ.30ರವರೆಗೆ ಕೃಷಿ ವಿಚಕ್ಷಣಾದಳ 1394 ಕ್ವಿಂಟಾಲ್ ಪ್ರಮಾಣದ ರೂ .415.78 ಲಕ್ಷ ಮೌಲ್ಯದ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಿದ್ದು,8039 ಟನ್ ಪ್ರಮಾಣದ ರೂ .145.32 ಲಕ್ಷ ರೂ. ಮೌಲ್ಯದ ರಸಗೊಬ್ಬರಗಳನ್ನು  5724 ಮತ್ತು 4592 ಕೆ.ಜಿ ಪ್ರಮಾಣದ ರೂ 640 ಲಕ್ಷ ಮೌಲ್ಯದ ಕೀಟನಾಶಕಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆಯಾಗಿ 2021-22 ನೇ ಸಾಲಿನಲ್ಲಿ ರೂ 62615 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಒಪ್ತಿ ಮಾಡಲಾಗಿದೆ.

ಬೆಳೆ ಸಮೀಕ್ಷೆ ವಿವರ: 2021-22ನೇ ಸಾಲಿನಲ್ಲಿ ಸುಮಾರು 25677 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳುವ ಗುರಿಯಿದ್ದು , ಅಕ್ಟೋಬರ್ 1ರವರೆಗೆ ಒಟ್ಟು 22805 ತಾಕುಗಳಲ್ಲಿ ಶೇ.88.81 ರಷ್ಟು  ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮುಗಳು ಒಳಗೊಂಡಂತೆ  ಬೆಳೆ ಸಮೀಕ್ಷೆ ಕೈಗೊಳ್ಳಲಾಗಿದೆ.

ಬೆಳೆ ವಿಮೆ: 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಒಟ್ಟು 1280 ಲಕ್ಷ ರೈತರು ಬೆಳೆ ಎಮಗೆ ನೋಂದಾಯಿಸಿದ್ದು,ಒಟ್ಟು 36 ಬೆಳೆಗಳನ್ನು ಅಧಿಸೂಚಿಸಲಾಗಿದೆ.

ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ: ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಇದುವರೆವಿಗೂ 8931 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ರೂ . 2.44 ಕೋಟಿ ವರ್ಗಾಯಿಸಲಾಗಿದೆ.

ರಾಜ್ಯದಲ್ಲಿ ದಾಖಲೆ ಪ್ರಮಾಣದ 158.73 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ಗುರಿ: 2020-21ರ ಸಾಲಿನ ರಾಜ್ಯದಲ್ಲಿ  ದಾಖಲೆ ಪ್ರಮಾಣದ  158.73 ಲಕ್ಷ ಮೆಟ್ರಿಕ್  ಟನ್  ಆಹಾರ ಧಾನ್ಯ  ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಾರೆ ಶೇಕಡಾ 2 ರಷ್ಟು  ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇಕಡಾ 10 ರಷ್ಟು  ಹೆಚ್ಚಿನ ಉತ್ಪಾದನೆಯಾಗಿರುತ್ತದೆ.

2021 ಮುಂಗಾರು ಹಂಗಾಮಿನಲ್ಲಿ 77.00 ಲಕ್ಷ  ಹೆಕ್ಟರ್ ವಿಸ್ತೀರ್ಣದಲ್ಲಿ ಬಿತ್ತನೆ ಗುರಿ ಇದ್ದು 77.20 ಲಕ್ಷ  ಹೆಕ್ಟರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಮೂಲಕ ಶೇಕಡಾ 100.26 ರಷ್ಟು  ಸಾಧನೆ ಮಾಡಲಾಗಿದೆ.ಡಿಎಪಿ, ಎಂಒಪಿ, ಕಾಂಪ್ಲೆಕ್ಸ್,  ಯೂರಿಯಾ ಸೇರಿದಂತೆ  ರಾಜ್ಯದಲ್ಲಿ ಒಟ್ಟು 2647000 ಲಕ್ಷ  ಮೆಟ್ರಿಕ್ ಟನ್  ರಸಗೊಬ್ಬರಕ್ಕೆ ಬೇಡಿಕೆ ಇದ್ದು, 3541606 ಲಕ್ಷ  ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿ 2834226 ಲಕ್ಷ  ಮೆಟ್ರಿಕ್ ಟನ್ ರಸಗೊಬ್ಬರ  ಮಾರಾಟ ಮಾಡಲಾಗಿದೆ. 

ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಜಕುಮಾರ್ ಕತ್ರಿ, ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಇಲಾಖಾ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…….

ರಾಜಕೀಯ

ರಸ್ತೆಬದಿ ಕಸ ಎಸೆಯುವವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್

ರಸ್ತೆಬದಿ ಕಸ ಎಸೆಯುವವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್

"ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ‌ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು" ಎಂದು ಡಿಸಿಎಂ

[ccc_my_favorite_select_button post_id="115575"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ಬುದ್ದಿವಾದ ಹೇಳಿದಕ್ಕೆ ಹೆತ್ತಮ್ಮನ ಕೊಂದ ಮಗಳು..!

ಬುದ್ದಿವಾದ ಹೇಳಿದಕ್ಕೆ ಹೆತ್ತಮ್ಮನ ಕೊಂದ ಮಗಳು..!

ಚಿಕ್ಕವಯಸ್ಸಿನಲ್ಲೇ ಪ್ರೀತಿ ಏಕೆ ಎಂಬ ಕುರಿತು ಬುದ್ದಿ ಹೇಳಿದ ಕಾರಣಕ್ಕೆ ಅಪ್ರಾಪ್ತ ಮಗಳೇ ತನ್ನ ಹೆತ್ತ ತಾಯಿಯನ್ನೇ ಹತ್ಯೆಗೈದಿರುವ (Murder) ಅಮಾನುಷ ಘಟನೆ ನಗರದ ಉತ್ತರಹಳ್ಳಿಯಲ್ಲಿ ನಡೆದಿದೆ.

[ccc_my_favorite_select_button post_id="115563"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!