ದೊಡ್ಡಬಳ್ಳಾಪುರ: ತಾಲೂಕಿನ ಕೆಲವೆಡೆ ರಾಸುಗಳಲ್ಲಿ ಕಾಲುಬಾಯಿ ರೋಗ ತೀವ್ರವಾಗಿದ್ದು, ರೈತರು ಬಸವಳಿಯುವಂತಾಗಿದೆ. ಈ ನಿಟ್ಟಿನಲ್ಲಿ ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿ ರೈತರ ನೆರವಿಗೆ ಧಾವಿಸಿದೆ.
ವಿಜಯದಶಮಿ ಹಬ್ಬದ ಪ್ರಯುಕ್ತ ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿ ಸದಸ್ಯರು ಕಾಲುಬಾಯಿ ರೋಗ ತೀವ್ರವಾಗಿರುವ ಕರೆನಹಳ್ಳಿ, ನೆಲ್ಕುಂಟೆ, ಶಿರವಾರ, ಮಡಿಕೆ ಬಚ್ಚಳ್ಳಿ ಮುಂತಾದ ಗ್ರಾಮಗಳ ಸುಮಾರು 60 ರೈತರಿಗೆ ಕಾಲುಬಾಯಿ (ಗೆರಸಲು)ರೋಗದ ಹತೋಟಿಗಾಗಿ ಸುಮಾರು 14 ಸಾವಿರ ಮೌಲ್ಯದ ವಾಷಿಂಗ್ ಸೋಡಾವನ್ನು ಉಚಿತವಾಗಿ ವಿತರಿಸಿದ್ದಾರೆ.
ಈ ಸಂದರ್ಭದಲ್ಲಿ ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿಯ ರಾಜ್ಯ ಸದಸ್ಯನವೀನ್ ಕುಮಾರ್, ದೊಡ್ಡಬಳ್ಳಾಪುರ ತಾಲೂಕು ಸಂಚಾಲಕರಾದ ಚೆನ್ನಕೇಶವ, ಅಶೋಕ್ ಮತ್ತಿತರರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….