ಯಲಹಂಕ: ಅಕ್ರಮವಾಗಿ ಮತಾಂತರ ನಡೆಸುತ್ತಿದ್ದಾರೆಂದು ಆರೋಪಿಸಿ, ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರ ಅದ್ದೆ ಗೇಟೆ ಬಳಿಯ ಖಾಸಗಿ ಶೆಡ್ ನ ಮೇಲೆ ದಾಳಿ ನಡೆಸಿದ್ದಾರೆ.
ಕ್ರೈಸ್ತ ಮಿಷನರಿಯೊಂದು ಪ್ರಾರ್ಥನೆ ನಡೆಸುವ ಹೆಸೆರಲ್ಲಿ, ಬಡ ಹಿಂದುಗಳಿಗೆ ಆಮೀಷ ಒಡ್ಡಿ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಹಿಂಜಾವೇ ಕಾರ್ಯಕರ್ತರು ಆರೋಪಿಸಿದರು.
ಈ ವೇಳೆ ಶೆಡ್ಗೆ ನುಗ್ಗಲು ಮುಂದಾದ ಕಾರ್ಯಕರ್ತರನ್ನು ತಡೆದ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಒಂದು ವಾರದೊಳಗೆ ಅಕ್ರಮ ಶೆಡ್ ತೆರವುಗೊಳಿಸುವಂತೆ ಹಿಂಜಾವೇ ಕಾರ್ಯಕರ್ತರು ಗಡುವು ನೀಡಿ ಸ್ಥಳದಿಂದ ತೆರಳಿದರು.
ಈ ಸಂಧರ್ಭದಲ್ಲಿ ಪ್ರಾಂತ ಸಂಪರ್ಕ ಪ್ರಮುಖ ರಾಜಣ್ಣ, ತುಮಕೂರು ವಿಭಾಗ ಪ್ರಧಾನ ಕಾರ್ಯದರ್ಶಿ ದೊಡ್ಡತುಮಕೂರು ಆನಂದ್, ತಾಲೂಕು ಪ್ರಧಾನ ಕಾರ್ಯದರ್ಶಿ ಘಾಟಿ ಚಿನ್ನಿ, ನಗರ ಪ್ರಧಾನ ಕಾರ್ಯದರ್ಶಿ ಹರೀಶ್, ಮುಖಂಡರಾದ ಮನೋಜ್ ಸೇರಿದಂತೆ ಅದ್ದೆ, ಸುರದೇನಪುರ, ಶ್ರೀರಾಮನಹಳ್ಳಿ, ರಾಜಾನುಕುಂಟೆ ಗ್ರಾಮಸ್ಥ ಸುಮಾರು 100 ಮಂದಿ ದಾಳಿ ನಡೆಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……