ದೊಡ್ಡಬಳ್ಳಾಪುರ: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಎದ್ದಿರುವ ಸುಳಿಗಾಳಿ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲೂಕಿನಾಧ್ಯಂತ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಹಲವು ಕೆರೆಗಳು ತುಂಬಿ ಕೋಡಿ ಹರಿದ್ದಿದ್ದರೆ. ರೈತರ ಜಮೀನುಗಳು ಜಲಾವೃತವಾಗಿವೆ.
ನಗರದ ಪ್ರಸಿದ್ದ ನಾಗರಕೆರೆ 23 ವರ್ಷಗಳ ನಂತರ ಕೋಡಿ ಹರಿದ್ದು, ನಗರವಾಸಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಗ್ರಾಮಾಂತರ; ತಾಲೂಕಿನ ಕೋಡಿಹಳ್ಳಿ, ಕೊನಘಟ್ಟ, ವಾಣಿಗರ ಹಳ್ಳಿ, ಕಂಚಿಗನಾಳ, ಮುತ್ತೂರು, ತಮ್ಮಗಾನಹಳ್ಳಿ, ಅಣ್ಣಯ್ಯನಪಾಳ್ಯ, ಹೊಸಹಳ್ಳಿ, ಸಾಸಲು ಚಿನ್ನಮ್ಮನ ಕೆರೆಗಳು ಹಲವು ವರ್ಷಗಳ ನಂತರ ತುಂಬಿ, ಕೋಡಿ ಹರಿಯುತ್ತಿವೆ.
ಸಂಭ್ರಮ: ಶುಕ್ರವಾರ ಬೆಳಗ್ಗೆ ಅಲ್ಪ ಪ್ರಮಾಣದಲ್ಲಿ ಸುರಿಯುತ್ತಿದ್ದು, ತುಂಬಿ ಹರಿಯುತ್ತಿರುವ ಕೆರೆಗಳ ನೋಡಲು ಜನತೆ ತಂಡೋಪ ತಂಡವಾಗಿ ಕೆರೆಗಳ ಬಳಿ ತೆರಳುತ್ತಿದ್ದು, ಕೆಲವರು ಹರಿಯುತ್ತಿರುವ ನೀರಿನಲ್ಲಿ ಇಳಿದು ಸಂಭ್ರಮಿಸುತ್ತಿದ್ದಾರೆ.
ಬಹು ವರ್ಷಗಳ ನಂತರ ತುಂಬಿರುವ ಕೆರೆಗಳ ಪೊಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಿಹೋಗಿದ್ದು, ಎಲ್ಲೆಡೆ ಹರ್ಷಕ್ಕೆ ಕಾರಣವಾಗಿದೆ.
ರೈತರ ನೆಮ್ಮದಿ ಕಸಿದ ಮಳೆ: ಈ ಬಾರಿ ಮುಂಗಾರು ಮತ್ತು ಹಿಂಗಾರು ಎರಡೂ ಋತುಗಳು ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿವೆ ಎಂದರೆ ತಪ್ಪಾಗಲಾರದು. ಕೇವಲ ಎರಡು ತಿಂಗಳುಗಳಲ್ಲಿ ಸುಮಾರು ಬೆಳೆ ಹಾಳಾಗಿದೆ. ಲಕ್ಷಾಂತರ ರೂ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸಂಪರ್ಕ ಕಡಿತ: ಮಳೆಯ ಕಾರಣ ಕೆರೆಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ಸಾಸಲು ಸಮೀಪದ ತಮ್ಮಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ರಸ್ತೆ ನೀರಿನಿಂದ ಆವೃತವಾಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಆದರೂ ಕೆಲವರು ನೀರಿನಲ್ಲಿಯೇ ಓಡಾಟ ನಡೆಸುತ್ತಿದ್ದಾರೆ.
ಶಾಲೆಗೆ ರಜೆ: ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಶಾಲೆಗಳಿಗೆ ಶಿಕ್ಷಣ ಇಲಾಖೆ ಎರಡು ದಿನ ರಜೆ ಘೋಷಿಸಿದೆ. ಇದರನ್ವಯ ಭಾನುವಾರದ ರಜೆ ದಿನ ಸೇರಿ ಒಟ್ಟು ಮೂರು ದಿನಗಳು ಮಕ್ಕಳಿಗೆ ರಜೆ ಸಿಕ್ಕಿದೆ.
ಒಟ್ಟಾರೆ ಸತತವಾಗಿ ಸುರಿಯುತ್ತಿರುವ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿ, ರೈತರ ನೆಮ್ಮದಿ ಕೆಡಿಸಿದ್ದರು. ಅನೇಕ ವರ್ಷಗಳ ನಂತರ ಕೆರೆಗಳು ತುಂಬಿ ಕೋಡಿ ಹರಿಯಲು ಕಾರಣವಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……