ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಮೂಗೇನಹಳ್ಳಿ ಬಾರೆ ಬಳಿ ಪ್ರತಿಭಟನೆ ಆರಂಭವಾಗಿದೆ.
ಗುಂಡ್ಲಹಳ್ಳಿ ಕ್ರಾಸ್ ಬಳಿ ಪೊಲೀಸರು ಸೆ.144 ನಿಷೇಧಾಜ್ಞೆ ವಿಧಿಸಿರುವುದರಿಂದ ಪ್ರತಿಭಟನೆ ಸ್ಥಳವನ್ನು ಮೂಗೇನಹಳ್ಳಿ ಬಾರೆ ಬಳಿ ನಡೆಸಲಾಗುತ್ತಿದೆ ಎನ್ನಲಾಗಿದೆ.
ಈ ಪ್ರತಿಭಟನೆಗೆ ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ಕನ್ನಡಿಗರ ಬಣದ ಮುಖಂಡರು ಭಾಗಿಯಾಗಿದ್ದು, ಕರವೇ ಬೆಂಬಲ ದೊರೆತಂತಾಗಿದೆ.
ಇನ್ನೂ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ಎಂಎಸ್ಜಿಪಿ ಕಸ ವಿಲೇವಾರಿ ಘಟಕ ಬಂದ್ಗೆ ಪಕ್ಷಾತೀತವಾದ ಒಕ್ಕೊರಲ ಒತ್ತಾಯವಾಗಿದ್ದು, ಪ್ರತಿಭಟನೆಕಾರರ ಬಂಧಿಸಿ, ಕಾಣದ ಸ್ಥಳದಲ್ಲಿ ಇಡುವುದು ಧರಣಿ ಹತ್ತಿಕಲು ಮುಂದಾಗಿರುವುದು ಖಂಡನೀಯ. ಬಿಬಿಎಂಪಿ ತ್ಯಾಜ್ಯದಿಂದ ಜನರ ಜೀವನ ಹಾಳಾಗಿದೆ. ಬಲವಂತದಿಂದ ಹೊರಾಟವನ್ನು ಹತ್ತಿಕ್ಕಲು ಸಾಧ್ಯ ಎನ್ನುವುದಾದರೆ ನೂರು ಜನ ಪ್ರತಿಭಟನೆಗೆ ಇಳಿಯುತ್ತಾರೆ. ದೊಡ್ಡಬಳ್ಳಾಪುರ ಹೋರಾಟಗಾರರ ತವರೂರು ಎಂಬುದು ಅಧಿಕಾರಿಗಳು ನೆನಪಿಡಬೇಕಿದೆ.
ನ್ಯಾಯಯುತ ಹೋರಾಟಕ್ಕೆ ಕೋವಿಡ್ ಅಡ್ಡಿ ಎನ್ನುವುದಾದರೆ ಎಷ್ಟು ಜನ ರಾಜಕೀಯ ನಾಯಕರ ವಿರುದ್ದ ದೂರು ದಾಖಲಿಸಲಾಗಿದೆ ಉತ್ತರ ನೀಡುವರೆ ಅಧಿಕಾರಿಗಳು. ತ್ಯಾಜ್ಯದಿಂದ ಮನುಕುಲವಲ್ಲದೆ, ವನ್ಯಸಂಪತ್ತಿಗೂ ತೊಂದರೆಯಾಗಿದೆ. ದೊಡ್ಡಬಳ್ಳಾಪುರ ಕಸದ ತೊಟ್ಟಿಯಲ್ಲ. ಬಿಬಿಎಂಪಿ ಮಾರ್ಷಲ್ ಕರೆಸುವ ಅನಿವಾರ್ಯತೆ ಏನಿದೆ. ಹಳ್ಳಿ ಜನ ಎದ್ದರೆ ಮಾರ್ಷಲ್ಗಳಿಂದ ಅಲ್ಲ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಯಾವುದೇ ಧರಣಿ ರೂಪುರೇಷೆ ಸಮರ್ಪಕವಾಗಿ ಇರಬೇಕಿದೆ. ತ್ಯಾಜ್ಯದ ಹೋರಾಟದಲ್ಲಿ ಎಲ್ಲಾ ಸಂಘಟನೆಗಳ ಬೆಂಬಲವಿದೆ. ಆದರೆ ಮಾಹಿತಿ ಕೊರತೆಯಿದೆಯಷ್ಟೆ. ಈ ಹೋರಾಟ ಸಮೂಹ ನಾಯಕತ್ವದ ಅಡಿಯಲ್ಲಿ ಜನರ ಸಂಕಷ್ಟ ಅಂತ್ಯಕಾಣುವವರೆಗೂ ಹೋರಾಟ ನಡೆಸಬೇಕೆಂದರು.
ಪ್ರತಿಭಟನೆ ಶಾಸಕ ಟಿ.ವೆಂಕಟರಮಣಯ್ಯ, ಟಿಎಪಿಎಂಸಿಎಸ್ ಅಧ್ಯಕ್ಷ ಸಿದ್ದರಾಮಯ್ಯ, ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಕರವೇ ಪ್ರವೀಣ್ ಶೆಟ್ಟಿಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಕನ್ನಡಿಗರ ಬಣದ ಚಂದ್ರಶೇಖರ್, ಬಿಜೆಪಿ ಮುಖಂಡ ಕೆ.ಟಿ.ಕೃಷ್ಣಪ್ಪ, ಮುಖಂಡರಾದ ಗೋವಿಂದ ರಾಜ್, ರಾಮಣ್ಣ, ಕೃಷ್ಷಮೂರ್ತಿ, ಪು.ಮಹೇಶ್, ಜಿ.ಲಕ್ಷ್ಮೀಪತಿ, ಬಶೀರ್, ಕರವೇ ನಂಜಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ.
ಪ್ರತಿಭಟನೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….