ದೊಡ್ಡಬಳ್ಳಾಪುರ: ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿದ್ಯಂತ “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಇಂದಿನಿಂದ ಪುನರಾರಂಭಿಸಲಾಗಿದ್ದು, ವೈದ್ಯಕೀಯ ತಂಡ ಆರೋಗ್ಯ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಹೆಜ್ಜಾಜಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಮೊದಲ ಡೋಸ್ ಪಡೆಯದವರಿಗೆ ಲಸಿಕೆ ನೀಡಲು ಮುಂದಾದಾಗ ಕುಟುಂಬವೊಂದು ಲಸಿಕೆ ಪಡೆಯಲು ಒಪ್ಪದೆ ತಂಡದೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಲಸಿಕೆಯಿಂದ ಏನಾದರೂ ಆದಲ್ಲಿ ನೀವೆ ಹೊಣೆಯೆಂದು ಹೈಡ್ರಾಮ ಸೃಷ್ಟಿಸಿದರು.
ಈ ವೇಳೆ ತಹಶೀಲ್ದಾರ್ ಮೋಹನಕುಮಾರಿ ಅವರು ಮನವಿ ಮಾಡಿದರು ಜಗ್ಗದೆ ಲಸಿಕೆ ಪಡೆಯುವುದಿಲ್ಲ, ಏನಾದ್ರೂ ಆದರೆ ಪರಿಹಾರ ನೀವೇ ಕೋಡಬೇಕೆಂದು ಪಟ್ಟುಹಿಡಿದರು. ನಂತರ ತಹಶೀಲ್ದಾರ್ ಅವರ ಸತತ ಮನವೊಲಿಕೆ ನಂತರ ಲಸಿಕೆ ಪಡೆಯಲು ಕುಟುಂಬ ಸಮ್ಮತಿಸಿತು.
ಕೋವಿಡ್ ಮೂರನೇ ಅಲೆಯ ತೀವ್ರತೆಯ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆಯದಿರುವುದು ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಕಷ್ಟಕ್ಕೆ ದೂಡಿದ್ದು, ಶೇ.100 ರಷ್ಟು ಲಸಿಕೆ ಕಾರ್ಯಕ್ಕೆ ಮೇಲಧಿಕಾರಿಗಳ ಒತ್ತಡ, ಲಸಿಕೆ ನೀಡಲು ಮುಂದಾದರೆ ಜನರ ಜಗಳದಿಂದ ಬಸವಳಿಯುವಂತಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….