ಬೆಂ.ಗ್ರಾ.ಜಿಲ್ಲೆ: ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.21ರ ಬುಲೆಟಿನ್ ಅನ್ವಯ ಇಂದು ಜಿಲ್ಲೆಯಲ್ಲಿ ಹೊಸದಾಗಿ 1036 ಜನರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಕೋವಿಡ್ ಸೋಂಕಿನಿಂದ 339 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ವರದಿಯನ್ವಯ ಹೊಸಕೋಟೆ ತಾಲೂಕಿನ 128 ಪುರುಷರು, 77 ಮಹಿಳೆಯರು ಸೇರಿ 205.
ದೇವನಹಳ್ಳಿ ತಾಲೂಕಿನ 72 ಪುರುಷರು, 31 ಮಹಿಳೆಯರು ಸೇರಿ 103.
ದೊಡ್ಡಬಳ್ಳಾಪುರ ತಾಲೂಕಿನ 238 ಪುರುಷರು, 176 ಮಹಿಳೆಯರು ಸೇರಿ 414.
ನೆಲಮಂಗಲ ತಾಲೂಕಿನ 190 ಪುರುಷರು, 123 ಮಹಿಳೆಯರು ಸೇರಿ 313 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಉಳಿದಂತೆ ಬೆಂಗಳೂರು ಉತ್ತರ ಹಾಗೂ ಅನ್ಯ ಜಿಲ್ಲೆಯ ಓರ್ವ ಪುರುಷನಿಗೆ ಸೋಂಕು ತಗುಲಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6024ಕ್ಕೆ ಏರಿಕೆಯಾಗಿದೆ. ಅಲ್ಲದೆ 17801 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಅನ್ವಯ 2986 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
(ಆತಂಕ ಬೇಡಾ, ಮುಂಜಾಗ್ರತೆ ಇರಲಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….