ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದ್ಯ ಹಾಸ್ಪಿಟಲ್, ಸ್ಪೆಷಾಲಿಟಿ ಸರ್ಜಿಕಲ್ ಸೆಂಟರ್ ಅನ್ನು ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕೋವಿಡ್ ಮೂರನೆ ಅಲೆಯ ಆತಂಕದ ನಡುವೆ ಉದ್ಘಾಟನೆಯಾಗಿರುವ ಆದ್ಯ ಆಸ್ಪತ್ರೆ ಸರ್ವಜನಿಕರಿಗೆ ಉತ್ತಮ ಸೇವೆ, ಸೌಲಭ್ಯವನ್ನು ನೀಡಿ ತಾಲೂಕಿನಜನರ ವಿಶ್ವಾಸಗಳಿಸಲಿ, ಅಲ್ಲದೆ ಕೋವಿಡ್ ಆತಂಕ ದೂರಾಗಿಸಲು ಈ ಆಸ್ಪತ್ರೆ ಸಿಬ್ಬಂದಿಗಳು ಶ್ರಮಿಸಲಿ ಎಂದರು.
ಆದ್ಯ ಆಸ್ಪತ್ರೆ ವೈದ್ಯರಾದ ಡಾ.ರಾಕೇಶ್ ಗೌಡ ಮಾತನಾಡಿ, ಉನ್ನತ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲಿನ ತಾಲೂಕಿನ ಜನತೆ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ತಜ್ಞ ವೈದ್ಯ ನೇತೃತ್ವದಲ್ಲಿ ಚಿಕಿತ್ಸೆ ದೊರಕಲಿದ್ದು, ಆಸ್ಪತ್ರೆಯಲ್ಲಿ 30 ಹಾಸಿಗೆಗಳು ಹಾಗೂ 10 ಹಾಸಿಗಳ ವೆಂಟಿಲೇಟರ್ಗಳೊಂದಿಗೆ ಐಸಿಯು ವಾರ್ಡ್ ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಮೂಳೆ ಮುರಿತ, ಬೆನ್ನುಮೂಳೆ, ಆರ್ಥೊಸ್ಕೋಪಿ ಮತ್ತು ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಮೀಸಲಾದ ಆರ್ಥೋಪೆಡಿಕ್ ಸರ್ಜಿಕಲ್ ಸೆಂಟರ್, ಎಲ್ಲಾ ವಿಶೇಷ ಮತ್ತು ಸೂಪರ್ ಸ್ಪೆಷಾಲಿಟಿ ಶಸ್ತ್ರಚಿಕಿತ್ಸೆಗಳು, 24×7 ಅಪಘಾತ ಮತ್ತು ತುರ್ತು ಚಿಕಿತ್ಸೆ, ಎರಡು ಸುಸಜ್ಜಿತವಾದ ಸರ್ಜಿಕಲ್ ಥಿಯೇಟರ್, ಲ್ಯಾಬೋರೇಟರಿ, ಡಿಜಿಟಲ್ ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಇತರೆ ಡಯೋಗ್ನೋಸ್ಟಿಕ್ ಸೇವೆಗಳು ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ.ಅಧ್ಯಕ್ಷ ವಿಶ್ವನಾಥ್, ನಗರಸಭೆ ಸದಸ್ಯರಾದ ಎಂ.ಮಲ್ಲೇಶ್, ಮೋಹನ್ ಕುಮಾರ್, ಆದಿಲಕ್ಷ್ಮೀ, ವೈದ್ಯರಾದ ಡಾ.ಸತೀಶ್, ಡಾ.ಮೂರ್ತಿಕುಮಾರ್, ಡಾ.ಇಂದಿರಾಪ್ರಸಾದ್, ಡಾ.ಸಚಿನ್, ಡಾ.ಸಂಘಮೇಶ್, ಡಾ.ದತ್ತಾ, ವ್ಯವಸ್ಥಾಪಕ ಪು.ಮಹೇಶ್, ಕಲಾವಿದರಾದ ಕೃಷ್ಣಮೂರ್ತಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….