ಮೋದಿ, ಬಿಜೆಪಿ, ಆರ್‌ಎಸ್‌ಎಸ್ಸೆ ಹಿಂದೂ ಧರ್ಮವಲ್ಲ; ಭಾಷಣ ಅಡ್ಡಿಪಡಿಸಿದ ಮೋದಿಗೆ ರಾಹುಲ್ ಗಾಂಧಿ ತಿರುಗೇಟು..!

ನವದೆಹಲಿ, (ಜುಲೈ.01): ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಚರ್ಚೆ ಆರಂಭಿಸಿ ಸಂವಿಧಾನದ ಹೆಸರಿನಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  “ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನ ಹರಡುವುದಲ್ಲ” ಎಂದು ಹೇಳಿದರು. 

ಈ ವೇಳೆ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತಾರೂಢ ಎನ್ಡಿಎ ಸಂಸದರ ನಡುವಿನ ವಾಕ್ಸಮರದ ಮಧ್ಯೆ, ಕೇಂದ್ರ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ನಾ ಹೇಳ್ತಾ ಇರೋದು ನಿಮಗೆ ಹಾಗೂ ಬಿಜೆಪಿಗೆ, ಮೋದಿ, ಬಿಜೆಪಿ, ಆರ್‌ಎಸ್ಎಸ್ ಪೂರ್ತಿ ಹಿಂದೂ ಸಮಾಜವಲ್ಲ ಎಂದರು.

ಈ ವೇಳೆ ವಿರೋಧ ಪಕ್ಷದ ಸದಸ್ಯರು ಮೋದಿ ಅವರು ಸದನವನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಲು ಮುಂದಾದ ವೇಳೆ ರಾಹುಲ್ ಗಾಂಧಿ ಅವರ ಮೈಕ್ ಮತ್ತೆ ಆಫ್ ಆಗಿತ್ತು‌, ಈ ವೇಳೆ ಮೈಕ್ ವಿಚಾರವಾಗಿ ಸಭಾಪತಿ ಸ್ಪಷ್ಟನೆ, ವಿರೋಧ ಪಕ್ಷದ ಸದಸ್ಯರ ನಡುವೆ ಆಕ್ಷೇಪ ಕಂಡುಬಂತು.

ನಂತರ ಮಾತನಾಡಿದ ರಾಹುಲ್ ಗಾಂಧಿ, ನಿಜ ಹೇಳಿದಕ್ಕೆ, ಭಗವಾನ್ ಈಶ್ವರ್ ಪೋಟೋ ತೋರಿಸಿದ್ದಕ್ಕೆ ತಡೆಯಲಾಗ್ತಾ ಇಲ್ಲ.. ಎದೆಗೆ ಬಾಣ ತಟ್ಟಿದೆ ಎಂಬುದ ಗಮನಿಸಬೇಕು.

ಭಾರತ ಸರ್ಕಾರದ ಆದೇಶದಿಂದ, ಭಾರತದ ಪ್ರಧಾನಿಯ ಆದೇಶದಿಂದ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಅದರ ಅತ್ಯಂತ ಆನಂದದಾಯಕ ಭಾಗವೆಂದರೆ ಇಡಿಯ 55 ಗಂಟೆಗಳ ವಿಚಾರಣೆ ಎಂದು ಗಂಭೀರ ಆರೋಪ ಮಾಡಿದರು.

ಭಾರತದ ಕಲ್ಪನೆ, ಸಂವಿಧಾನ ಮತ್ತು ಸಂವಿಧಾನದ ಮೇಲಿನ ದಾಳಿಯನ್ನು ವಿರೋಧಿಸಿದ ಜನರ ಮೇಲೆ ವ್ಯವಸ್ಥಿತ ಮತ್ತು ಪೂರ್ಣ ಪ್ರಮಾಣದ ದಾಳಿ ನಡೆದಿದೆ. ನಮ್ಮಲ್ಲಿ ಅನೇಕರ ಮೇಲೆ ವೈಯಕ್ತಿಕವಾಗಿ ಹಲ್ಲೆ ನಡೆಸಲಾಯಿತು.

ಕೆಲವು ನಾಯಕರು ಇನ್ನೂ ಜೈಲಿನಲ್ಲಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸುವ ಯಾರನ್ನಾದರೂ ಹತ್ತಿಕ್ಕಲಾಯಿತು ಎಂದರು.

ನಾವೆಲ್ಲ ಸಾಮಾನ್ಯರು ಮೋದಿ ದೇವರ ಜೊತೆ ಮಾತಾಡ್ತಾರೆ. ನಾವೆಲ್ಲ ಬಯೋಜಲಿಕಲಿ ಜನ್ಮವಿತ್ತವರು, ನಮಗೆ ಜನನವಿದೆ, ಸಾವಿದೆ ಆದರೆ ಮೋದಿ ದೇವರ ಅವತಾರ ಅಂತಾರೆ‌. ಇವರೇಳ್ತಾರೆ ಮಹಾತ್ಮ ಗಾಂಧಿ ನಿಧನರಾದರು ಮತ್ತು ಗಾಂಧಿಯನ್ನು ಚಲನಚಿತ್ರದಿಂದ ಪುನರುಜ್ಜೀವನಗೊಳಿಸಲಾಯಿತು ಎಂದು. ನೀವು ಅಜ್ಞಾನವನ್ನು ಅರ್ಥ ಮಾಡಿಕೊಳ್ಳಬಲ್ಲಿರಾ..? ನಾನು ಗಮನಿಸಿದ ಮತ್ತೊಂದು ವಿಷಯವೆಂದರೆ ಇದು ಕೇವಲ ಒಂದು ಧರ್ಮವಲ್ಲ, ಅದು ಧೈರ್ಯದ ಬಗ್ಗೆ ಮಾತನಾಡುತ್ತವೆ ಎಂದು ರಾಹುಲ್ ಗಾಂಧಿ ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ದೊಡ್ಡಬಳ್ಳಾಪುರ TAPMCS ಚುನಾವಣೆ: ತಾಲ್ಲೂಕಿನಾಧ್ಯಂತ ಬಿರುಸಿನ ಪ್ರಚಾರ

ನವೆಂಬರ್ 2 ರಂದು ನಡೆಯಲಿರುವ ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.

[ccc_my_favorite_select_button post_id="115546"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಗುಡ್ಮಾರ್ನಿಂಗ್ ನ್ಯೂಸ್: ಆಸ್ಟ್ರೇಲಿಯಾಗೆ ಮುಖಭಂಗ.. ಫೈನಲ್‌ಗೆ ಇಂಡಿಯಾ

ಭಾರತ (India) ತಂಡವು ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ (Women's ODI World Cup tournament) ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ವಿರುದ್ಧ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

[ccc_my_favorite_select_button post_id="115495"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ ನ್ಯೂಸ್ ಅಪ್ಡೇಟ್.. ಬಾಲಕ ದುರ್ಮರಣ

ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಸಮೀಪದ ಹಾಲು ಶಿಥಲೀಕರಣ ಘಟಕದ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ (Accident), ಸುಮಾರು 11 ವರ್ಷದ ಬಾಲಕ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.

[ccc_my_favorite_select_button post_id="115509"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!