ಹರಿತಲೇಖನಿ ದಿನಕ್ಕೊಂದು ಕಥೆ: ತಂದೆಗೆ ಮಗನ ಉಡುಗೊರೆ

ತುಂಬಾ ಬಡತನದಲ್ಲಿ ಬೆಳೆದ ಒಬ್ಬ ಆರ್ಡಿನರಿ ಅಂಚೆ ಕಚೇರಿಯ ಉದ್ಯೋಗಿ. ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಿ ಉದ್ಯೋಗಸ್ಥರನ್ನಾಗಿ ಮಾಡಿ ವಿದೇಶಗಳಲ್ಲಿ ವಾಸ್ತವ್ಯ ಹೂಡುವ ಹಾಗೇ ಮಾಡಿದ.

ಇಬ್ಬರು ಮಕ್ಕಳಿಗೆ ಮದುವೆಯಾಗಿ ಮಕ್ಕಳಾದವು .ಇಬ್ಬರೂ ಸುಖೀ ಸಂಸಾರಸ್ಥರೇ. ಆದರೆ ತಂದೆಗೆ ಊರಿಂದೂರಿಗೆ ವರ್ಗಾವಣೆಗಳಾಗುತ್ತಾ ಕೊನೆಗೆ ಆಂದ್ರಪ್ರದೇಶದ ಚಿಂತಲಪಲ್ಲಿ ಎಂಬ ಕಚೇರಿಯಲ್ಲಿ ನಿವೃತ್ತಿ ಸ್ಥಾನಕ್ಕೆ ಬಂದು ನಿಂತರು. ನಿವೃತ್ತಿಯು ಆಯಿತು, ಈಗ ಅಪ್ಪನಿಗೆ ಚಿಂತೆ.

ಮಕ್ಕಳಿಗೆ ಫೋನಾಯಿಸುತ್ತಾರೆ “ಒಂದೆರಡು ದಿನ ಊರಿಗೆ ಬಂದುಹೋಗಲು ಸಾಧ್ಯವೇ” ಎಂದು.? ಮಕ್ಕಳು ಸಹ ಒಪ್ಪುತ್ತಾರೆ. ಆದರೆ ಮಕ್ಕಳು ಒಂದೆರಡು ದಿನವಲ್ಲದೆ ಒಂದು ತಿಂಗಳು ರಜೆ ಮಾಡಿ ಊರಿಗೆ ಬರುತ್ತಾರೆ.ಬಂದ ಮಕ್ಕಳಿಗೆ ತಂದೆ ಹೇಳುತ್ತಾರೆ “ನಿಮಗೊಂದು ವಿಷಯ ತಿಳಿಸಬೇಕಿದೆ “ಎಂದು. 

“ನನ್ನ ನಿವೃತ್ತಿಯಾಗಿದೆ. ಹಾಗೆಯೇ ನನ್ನ ಖಾತೆಗೆ ಒಂದಷ್ಟು ಲಕ್ಷ ಪಿ ಎಫ್ ಹಣವು ಬಂದಿದೆ. ನೀವಿಬ್ಬರು ಆ ಹಣವನ್ನು ಹಂಚಿಕೊಂಡರೆ ನಾನು ನನ್ನ ಪೆನ್ಶನ್  ಹಣದಲ್ಲಿ ನಿಮ್ಮ ತಾಯಿಯನ್ನು ಸಾಕಬಲ್ಲೆ. ಈ ಸುದ್ದಿ ಹೇಳಲಿಕ್ಕೆಂದೇ ನಿಮ್ಮನ್ನು ಕರೆಸಿದೆ ಎಂದು ಮತ್ತೆ ಒಂದೆರಡು ದಿನ ಒಟ್ಟಿಗೆ ಎಲ್ಲರೂ ಎಲ್ಲಾದರೂ ಸುತ್ತಿ ಬರೋಣವೆಂದು” ಇಚ್ಛೆ ವ್ಯಕ್ತಪಡಿಸುತ್ತಾರೆ. 

ಅದಕ್ಕೆ ಮಕ್ಕಳು ಹೇಳುತ್ತಾರೆ “ಮೊದಲ ಸಲ ಕೆಲಸ ಮಾಡಿದ ಅಂಚೆ ಕಚೇರಿಯಾದ ಉಡುಪಿಯ ಹಿತ್ತಲುಮನೆ ಎಂಬ ಗ್ರಾಮಕ್ಕೆ ಹೋಗಿ ಬರೋಣ” ಎಂದು ಹೇಳುತ್ತಾರೆ.

ತಂದೆಗೆ ಆಶ್ಚರ್ಯ ಆ ಗ್ರಾಮದ್ಲಲೇನಿದೆ ಎಂದು ಆದರೂ ಮಕ್ಕಳಿಗೆ ನಿರಾಸೆಗೊಳಿಸದೆ ಹೊರಟುನಿಲ್ಲುತ್ತಾರೆ. 

ಆ ಗ್ರಾಮದಲ್ಲಿ ಮೊದಲು ಕೆಲಸ ಮಾಡುವ ಸಮಯದಲ್ಲಿ ವಾಸ್ತವ್ಯ ಹೂಡಿದ್ದ ಗುಡಿಸಲು ಚೊಕ್ಕವಾದ ಮನೆ. ತನ್ನ ಮಕ್ಕಳು ಆಟವಾಡಿದ್ದ ಅಂಗಳ ಹಸಿರುಮಯವಾಗಿದೆ. ಆಗ ನೆಟ್ಟ ಸಸಿಗಳು ಮರಗಳಾಗಿವೆ. ತೆಂಗಿನ ಮರ ತುಂಬಾ ಕಾಯಿಗಳಿವೆ. ಎತ್ತ ನೋಡಿದರು ಹಸಿರು ಮನೆಯ ಕಂಪೌಂಡಿನ ಒಳಗೆ ಪರಿಶುದ್ಧ ತುಳಸಿ ಗಿಡ ಗೇಟು ಪ್ರವೇಶಿಸುವಷ್ಟರಲ್ಲಿ ಒಬ್ಬ ಆಳು ಬಂದು ಗೇಟಿನ ಬೀಗದ ಕೀಲಿ ಮಗನ ಕೈ ಗೆ ಇಡುತ್ತಾನೆ. ಮಗ ಬೀಗ ತೆಗೆದು ಒಳ ಬಂದಾಗ ತಂದೆಗೆ ಎಲ್ಲವೂ ಅಯೋಮಯ ಈ ಆಳು ಯಾರು, ಈ ಮನೆಗೆ ಏಕೆ ಬಂದೆವು,  ಎಲ್ಲವೂ ನಿಗೂಢವೇ..

ಮನೆಯ ಒಳಗೆ ಬರುವಷ್ಟರಲ್ಲಿ ಎಲ್ಲವೂ ಸ್ವಚ್ಛಂದ ಸ್ವಚ್ಛಂದ… ತಂದೆ ಏನೋ ಕೇಳಲು ಬರುವಷ್ಟರಲ್ಲಿ ಮಕ್ಕಳೇ ಮಾತನಾಡಲು ಶುರು ಮಾಡುತ್ತಾರೆ ಅಪ್ಪ…. ನಿಮ್ಮ ನಿವೃತ್ತಿ ಹತ್ತಿರವಿದೆಯೆಂದು ತಿಳಿಯಿತು .‌ ಈ ಸ್ಥಳ ನಿಮಗೆ ತುಂಬಾ ಇಷ್ಟವೆಂದು ಒಂದು ವರ್ಷದ ಹಿಂದೆ ಈ ಸ್ಥಳವನ್ನು ನಾವೇ ಕೊಂಡುಕೊಂಡಿದ್ದೇವೆ.

ವರ್ಗಾವಣೆಗಳಿಂದ ಬಸವಳಿದಿದ್ದೀರಿ ಸಾಕು ನಿಮ್ಮ ನೆಮ್ಮದಿಗೆ ಒಂದು ಮನೆ ಇರಬೇಕು ಎಂದು ನಿಮಗೆ ತಿಳಿಸದೆ ನಾವಿಬ್ಬರು ಬಂದು ಇಲ್ಲಿ ಎಲ್ಲವೂ ಸರಿಪಡಿಸಿ ಹೋದೆವು ನಿಮ್ಮ ಪಿ ಎಫ್ ಹಣ ಖಾತೆಯಲ್ಲೇ ಇರಲಿ ನಮ್ಮನ್ನು ಬಡತನದಲ್ಲಿ ಓದಿಸಿದಿರಿ, ಬೆಳೆಸಿದಿರಿ ನಾವು ಈಗ ಸದೃಢರಾಗಿದ್ದೇವೆ. ನಮ್ಮ ಮಕ್ಕಳನ್ನು ನಿಮ್ಮಲ್ಲಿಯೇ ಬಿಟ್ಟು ಹೋಗುತ್ತೇವೆ. ಅವರು ನಿಮ್ಮ ಅಡಿಯಲ್ಲಿ ಬೆಳೆದರೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಅವರಿಗೂ ತಿಳಿಯುತ್ತದೆ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ.

ಮೊಮ್ಮಕ್ಕಳನ್ನು ಓದಿಸಿ ಕೆಲಸಕ್ಕೆಂದು ಆಳು ಇದ್ದಾನೆ. ಪ್ರತಿ ತಿಂಗಳು ಅವನ ಸಂಬಳವನ್ನು ಅವನ ಖಾತೆಗೆ ತುಂಬುತ್ತೇವೆ .ನಮ್ಮ ಮನೆಯ ಪಕ್ಕದಲ್ಲೇ ಅವನಿಗೂ ವಾಸ್ತವ್ಯವಿದೆ. ವರ್ಷಕ್ಕೊಮ್ಮೆ ತಪ್ಪದೆ ಬಂದುಹೋಗುತ್ತೇವೆ. ಎಂದು ಹೇಳುವಷ್ಟರಲ್ಲಿ ಅಪ್ಪನ ಕಣ್ಣಾಲಿಗಳು ತುಂಬಿ, ಮೂಕಪ್ರೇಕ್ಷಕರಾಗಿ ಬಿಟ್ಟರು. ಪ್ರತಿಯೊಬ್ಬ ಮಕ್ಕಳು ಇದೇ ತರಹ ನಡೆದುಕೊಂಡರೆ ಸಮಾಜದಲ್ಲಿ ವ್ರದ್ಧಾಶ್ರಮಗಳ ಅಗತ್ಯತೆ ಉದ್ಭವಿಸುವುದಿಲ್ಲ. 

ಪ್ರತಿಯೊಬ್ಬ ಪಾಲಕರು ಸಂತೋಷದಿಂದ ಜೀವನ ನಡೆಸಬಹುದು. ಇಂತಹ ಉತ್ತಮ ಮಾರ್ಗದಲ್ಲಿ ನಾವು – ನೀವು ಸಾಗೋಣ.

ಕೃಪೆ: ಸಾಮಾಜಿಕ ಜಾಲತಾಣ, (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!