ಬೆಂಗಳೂರು, (ಆಗಸ್ಟ್.16); ಮಾನ್ಯತಾ ಟೆಕ್ ಪಾರ್ಕ್‌ನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ 37 ವರ್ಷದ ವಿಪಿನ್ ಗುಪ್ತಾ ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣದ ಕುರಿತಂತೆ ಉತ್ತರ ಪ್ರದೇಶದ ನೋಯ್ತಾ ಬಳಿಯ ಮಾಲ್ ಸಮೀಪ ವಿಪಿನ್ ಗುಪ್ತಾನನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ಅಧಿಕೃವಾಗಿ ತಿಳಿಸಿದ್ದಾರೆ.
ಟೆಕ್ಕಿಯು ಸುರಕ್ಷಿತವಾಗಿದ್ದು, ಗುರುತು ಪತ್ತೆಯಾಗದಂತೆ ಹೇರ್ ಕಟಿಂಗ್ ಕೂಡ ವಿಪಿನ್ ಮಾಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು ವಿಪಿನ್ ನನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಕೆಲ ದಿನಗಳ ಹಿಂದೆ ಕೈಯಲ್ಲಿ ಟಿ ಶರ್ಟ್ ಹಿಡಿದು ತನ್ನ ಬೈಕ್ ತೆಗೆದುಕೊಂಡು ಮನೆ ಬಿಟ್ಟಿರುವುದಾಗಿ ವಿಪಿನ್ ಪತ್ನಿ ನಗರ ಪೊಲೀಸ್ ಆಯುಕ್ತರಿಗೆ ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.
ವಿಪಿನ್ ಮನೆ ಬಿಟ್ಟು ಕೆಲವೇ ನಿಮಿಷಗಳಲ್ಲಿ 1 ಲಕ್ಷದ 80 ಸಾವಿರ ರೂಪಾಯಿಯನ್ನು ಡ್ರಾ ಮಾಡಲಾಗಿದ್ದು, ಅವರು ಯಾವ ಸಂಕಷ್ಟದಲ್ಲಿದ್ದಾರೋ ಗೊತ್ತಿಲ್ಲ. ಅವರನ್ನು ದಯವಿಟ್ಟು ಕಾಪಾಡಿ ಎಂದು ಪತ್ನಿ ಗೋಳಾಡಿದ್ದರು.
ಇದೀಗ ವಿಪಿನ್ ನೋಯ್ದಾದಲ್ಲಿ ವೇಷ ಬದಲಿಸಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿಪಿನ್ ಕಿಡ್‌ನ್ಯಾಪ್ ಆಗಿದ್ದರಾ? ಅಥವಾ ಸ್ವಇಚ್ಛೆಯಿಂದ ಮನೆ ತೊರೆದಿದ್ದರಾ? ಎಂಬ ಪ್ರಶ್ನೆಗಳಿಗೆ ಉತ್ತರಿಸಿರುವ ವಿಪಿನ್ ತಾನೇ ಮನೆ ಬಿಟ್ಟು ಹೋಗಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….