ದೊಡ್ಡಬಳ್ಳಾಪುರ, (ಆಗಸ್ಟ್.16); ಹೂವು ಹಣ್ಣು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ತಾಲೂಕಿನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಶ್ರದ್ಧಾ ಭಕ್ತಿ ಸಂಭ್ರಮದಿಂದ ಆಚರಿಸಿದರು.
ಮಹಾಲಕ್ಷ್ಮಿಯ ಕಳಶ ಸ್ಥಾಪಿಸಿ ತಿರು ತೋರಣ ಹೂಗಳಿಂದ ಸಿಂಗರಿಸಿದ ಲಕ್ಷ್ಮೀ ಪ್ರತಿಮೆಗಳಿಗೆ ಅಲಂಕಾರ ಮಾಡುವ ಮೂಲಕ ಮಾನಿನಿಯರು ಪೂಜೆ ನೆರವೇರಿಸಿದರು.
ಕಳಸಕ್ಕೆ ಲಕ್ಷ್ಮೀ ಮುಖವಾಡ ಹಾಕಿ ಅಲಂಕಾರಿಕ ಆಭರಣಗಳನ್ನು ಧರಿಸಿ, ಬಾಳೆಕಂದು, ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಸುಮಂಗಲಿಯರಿಗೆ ಹರಿಶಿನ ಕುಂಕುಮ ನೀಡುವ ಆಚರಣೆ ಎಲ್ಲೆಡೆ ಕಂಡು ಬಂದಿತು.
ನಗರದ ಕನಕದಾಸನಗರದಲ್ಲಿನ ಶ್ರೀ ಲಕ್ಷ್ಮೀ ದೇವಾಲಯ, ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ರಾಮಲಿಂಗ ಚೌಡೇಶ್ವರಿ, ಕಾಳಿಕಾ ಕಮಟೇಶ್ವರ, ಅಭಯ ಚೌಡೇಶ್ವರಿ, ಗಂಗಮ್ಮ, ಮುತ್ಯಾಲಮ್ಮ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಕುಂಕುಮ-ಬಳೆ ಪ್ರಸಾದ ವಿತರಣೆ: ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ತಾಲೂಕಿನ ಘಾಟಿ ಕ್ಷೇತ್ರದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ದಾರ್ಮಿಕ ದತ್ತಿ ಇಲಾಖೆಯ ಅದೇಶದಂತೆ, ದೇವಾಲಯಕ್ಕೆ ಬಂದ ಮಹಿಳೆಯರಿಗೆ ಅರಿಶಿಣ ಕುಂಕುಮ ಮತ್ತು ಬಳೆ ಪ್ರಸಾದವನ್ನು ನೀಡಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು
ಕಾರ್‍ಯಕ್ರಮದಲ್ಲಿ ದೇವಾಲಯದ ಕಾರ್ಯನಿರ್ವಹಣಾಕಾರಿ ಎಂ. ನಾರಾಯಣಸ್ವಾಮಿ ಪ್ರಧಾನ ಅರ್ಚಕ ಆರ್.ಸುಬ್ರಹ್ಮಣ್ಯ, ದೇವಾಲಯ ಸಿಬ್ಬಂದಿ ನಂಜಪ್ಪ, ದೇವಾಲಯದ ಸಿಬ್ಬಂದಿ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….