ದಾಬಸ್‌ಪೇಟೆ, (ಸೆ.04): ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಟೆಂಪೋ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೋಂಪುರ ಹೋಬಳಿಯ ಕೂತಗಟ್ಟ ಗ್ರಾಮದ ರೋಷನ್ ಖಾನ್ ಹಾಗೂ ರಫಿಯಾ ಸುಲ್ತಾನ್ ಎಂಬುವವರ ಪುತ್ರಿ ಜುನೇರಾ ಖಾನಂ (2ವರ್ಷ) ಮೃತಪಟ್ಟ ಮಗು.
ಮಂಗಳವಾರ ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡುವ ನಂದೀಶ್ ಎಂಬ ವ್ಯಕ್ತಿ ಕೂತಗಟ್ಟ ಗ್ರಾಮದಲ್ಲಿ ಮನೆಯೊಂದಕ್ಕೆ ಬುಕ್ಕಿಂಗ್ ಆಗಿದ್ದ ಗ್ಯಾಸ್ ಸಿಲಿಂಡರನ್ನು ಡೆಲಿವರಿ ಮಾಡಿ ವಾಹನ ಹತ್ತುವಾಗ ಮಗು ಟೆಂಪೋದ ಚಕ್ರದ ಸಮೀಪಕ್ಕೆ ಬಂದಿದ್ದು, ಇದನ್ನು ಗಮನಿಸಿದ ಟೆಂಪೋ ಚಾಲನೆ ಮಾಡಿದ ಪರಿಣಾಮ ಮಗುವಿಗೆ ಡಿಕ್ಕಿ ಹೊಡೆದು ಮಗುವಿನ ತಲೆಗೆ ಗಾಯವಾಗಿದ್ದು ಮೂಗು ಹಾಗೂ ಕಿವಿಯಲ್ಲಿ ರಕ್ತಸ್ರಾವವಾಗಿದೆ.
ತಕ್ಷಣ ಮಗು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಘಟನೆಗೆ ಸಂಬಂಧಿಸಿದಂತೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….