ಬುಧವಾರ, ಸೆಪ್ಟೆಂಬರ್ 04, 2024, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ನಿಮ್ಮ ಮನಸ್ಸಿಗೆ ಬೇಡವಾದ ಘಟನೆಗಳು ಜರುಗುವುದರಿಂದ ಮಾನಸಿಕ ತಲ್ಲಣ ಉಂಟಾಗಬಹುದು, ಜಾಗರೂಕರಾಗಿರಿ. ನಿಮಗೆ ಹಣಕಾಸಿನ ನೆರವು ದೊರೆಯುವುದು ಮತ್ತು ಕುಟುಂಬ ವರ್ಗದವರ ಸಹಕಾರವೂ ದೊರೆಯುವ ಯೋಗವಿದೆ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಪ್ರತಿನಿತ್ಯ ಕಛೇರಿ ಓಡಾಟ ಇದ್ದದ್ದೇ. ಆದರೆ ಅವುಗಳ ಮಧ್ಯೆಯೇ ಜೀವಿಸಿ ಅವುಗಳನ್ನು ಮೆಟ್ಟಿ ನಿಲ್ಲುವುದೇ ಜೀವನದ ಆಟ. ಕೆಲಸ ಕಾರ್ಯಗಳು ಮಂದ ಪ್ರಗತಿಯಲ್ಲಿ ಸಾಗಿದರೂ ಗುರುವಿನ ಶುಭ ಸಂಚಾರದಿಂದಾಗಿ ಅಂತಿಮವಾಗಿ ಶುಭಫಲ ಕಾಣುವಿರಿ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ನಿಮ್ಮ ಮಕ್ಕಳು ನಿಮಗೆ ಸಹಕಾರಿಯಾಗಿ ನಿಲ್ಲುವರು. ಹಣಕಾಸಿನ ಸ್ಥಿತಿ ಉತ್ತಮ ವಾಗಿರುತ್ತದೆ. ಬೆಳ್ಳಗೆ ಇರುವುದೆಲ್ಲಾ ಹಾಲು ಎಂದು ನಂಬಿ ಮೋಸ ಹೋಗದಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಪ್ರಯತ್ನಿಸಿ. (ಭಕ್ತಿಯಿಂದ ಶ್ರೀ ಗ್ರಾಮದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ದಿನನಿತ್ಯದ ಕೆಲಸಗಳು ಇದ್ದೇ ಇರುತ್ತದೆ. ಆದರೆ ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಮಾಡಲು ಪ್ರಶಸ್ತವಲ್ಲ. ಜ್ಞಾನಕಾರಕ ಗುರುವನ್ನು ಆರಾಧಿಸುವುದರಿಂದ ಒಳಿತಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಮನೆ ಬದಲಿಸುವ ಸಂಗತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ. ವ್ಯಾಪಾರ ವ್ಯವಹಾರಗಳಿಗೆ ಇದು ಸಕಾಲ ದಿನ. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ನಿಮ್ಮ ಸಾಮಾಜಿಕ ಕಾಳಜಿಯನ್ನು ಜನ ಕೊಂಡಾಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ, ಕಿರಿಕಿರಿಯನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಆದಷ್ಟು ಏಕಾಂತ ಸ್ಥಳಕ್ಕೆ ಹೋಗಿ ಮನಸ್ಸಿನ ನೆಮ್ಮದಿ ಕಂಡುಕೊಳ್ಳಿ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ನಿರಾಶಾದಾಯಕ ನಡವಳಿಕೆ ಇಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿಯನ್ನು ಕುಂಠಿತಗೊಳಿ ಸಿದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಅಧಿಕ ಭಾವನೆಗಳು ನಿಮ್ಮ ದಿನವನ್ನು ನಾಶ ಮಾಡಬಹುದು. ವಿಶೇಷವಾಗಿ ನೀವು ನಿಮ್ಮ ಪ್ರೀತಿ ಪಾತ್ರರು ಇತರರೊಂದಿಗೆ ತುಂಬಾ ಸ್ನೇಹದಿಂದಿರುವುದನ್ನು ಕಂಡಾಗ ಎಲ್ಲರಿಗೂ ಅಸೂಯೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ಧನಸ್ಸು ರಾಶಿ: ದೂರ ಸಂಚಾರದಿಂದ ದೇಹಾಯಾಸವಾದೀತು.ವೃತ್ತಿರಂಗದಲ್ಲಿ ಸಮಾಧಾನಕರವಲ್ಲದ ವಾತಾವರಣ. ವಿದ್ಯಾರ್ಥಿಗಳಿಗೆ ವಿದ್ಯಾಲಾಭ ಉತ್ಸಾಹ ತರಲಿದೆ. ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ವಾದ-ವಿವಾದಗಳಿಗೆ ಕಾರಣರಾಗದಿರಿ.ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಸಾಂಸಾರಿಕವಾಗಿ ನೆಮ್ಮದಿ, ಶಾಂತಿ ಸಮಾಧಾನ ತರಲಿದೆ. ನಿಂತ ಕೆಲಸ ಕಾರ್ಯಗಳನ್ನು ಚಾಲನೆಗೊಳಿಸಿರಿ. (ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಅಧಿಕ ಬಂಡವಾಳ ತೊಡಗಿಸಲು ಶತಪ್ರಯತ್ನ ನಡೆಸುತ್ತಿ ದ್ದೀರಿ. ಯಾವುದಕ್ಕೂ ಮಿತಿ ಇರಲಿ, ತಾಂತ್ರಿಕ ವಿದ್ಯೆಯಲ್ಲಿ ತೊಡಗಿಕೊಂಡ ವರಿಗೆ ಯಶಸ್ಸು. ಕಾರ್ಮಿಕ ವರ್ಗದ ವರಿಗೆ ಬಿಡುವಿಲ್ಲದ ಕೆಲಸದಿಂದ ದೇಹಾಯಾಸ ಉಂಟಾಗಬಹುದು. ಸರ್ಕಾರಿ ಕೆಲಸಗಳಿಗೆ ಅಲೆದಾಡುವ ಸಾಧ್ಯತೆ ಕಂಡುಬರುವುದು. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಅತಿಯಾದ ಉತ್ಸಾಹದಿಂದ ವೃತ್ತಿ ಜೀವನದಲ್ಲಿ ಹೊಸ ತಿರುವು. ಸಮಸ್ಯೆಗಳನ್ನು ಸುಲಭವಾಗಿ ನಿಬಾಯಿಸಬಲ್ಲಿರಿ. ಪಿತ್ರಾರ್ಜಿತ ಆಸ್ತಿ ದೊರಕುವ ಸಂಭವ ಕಂಡುಬರುವುದು. ದೇವತಾ ದರ್ಶನ ಭಾಗ್ಯವಿದೆ. ಮಕ್ಕಳೊಂದಿಗೆ ಸಂತಸದ ದಿನವಾಗಿ ರುವುದು.ಬಂಧು ಮಿತ್ರರ ಆಗಮನ ಸಾಧ್ಯತೆಯೂ ಕಂಡುಬರುವುದು. (ಭಕ್ತಿಯಿಂದ ಶ್ರೀ ಅಷ್ಟ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ ಒಳಿತಾಗುವುದು.)
ತಿಥಿ: ಪಾಡ್ಯಮಿ / ದ್ವಿತೀಯ
ನಕ್ಷತ್ರ: ಉತ್ತರ ನಕ್ಷತ್ರ.
ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….