ಕೋಲಾರ, (ಸೆ.04): ಅನಾರೋಗ್ಯದಿಂದ ಬಳಲುತ್ತಿದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಇಂದು ನಿಧನ ಹೊಂದಿದ್ದಾರೆ.
ಗಾಯತ್ರಿ (51) ಮೃತಪಟ್ಟ ಪಿಎಸ್‌ಐ ಎಂದು ಗುರುತಿಸಲಾಗಿದೆ.
ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯಲ್ಲಿ ನಿವಾಸಿಯಾಗಿರುವ ಇವರು ಕಳೆದ 30 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಾಯತ್ರಿ ಅವರ ಸೇವಾವಧಿ ಇನ್ನೂ 9 ವರ್ಷ ಇತ್ತು.
ಅಕಾಲಿಕವಾಗಿ ಮರಣ ಹೊಂದಿದ ಗಾಯತ್ರಿ ಅವರಿಗೆ ಎಸ್‌ಪಿ ಶಾಂತರಾಜು, ಡಿವೈಎಸ್‌ಪಿ ಪಾಂಡುರಂಗ ಸೇರಿದಂತೆ ಕೆಜಿಎಫ್ ಪೊಲೀಸರು ಸಂತಾಪ ಸೂಚಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….