ಹರಿತಲೇಖನಿ ದಿನಕ್ಕೊಂದು ಕಥೆ: ನೇರಳೆ ಮರದ ಮಾಲೀಕರು ಯಾರು.‌?

ಬೆಜ್ಜಿಹಳ್ಳಿ ಎಂಬ ಊರಿನಲ್ಲಿ ಕೆಂಚಪ್ಪ ಎನ್ನುವ ಜಿಪುಣನಿದ್ದನು. ಊರಿನಲ್ಲಿ ಅವನಿಗೆ ಮೂರು ಎಕರೆ ಜಮೀನಿತ್ತು. ಜಮೀನಿನ ತುಂಬಾ ತೆಂಗಿನ ಮರಗಳಿದ್ದವು. ಮರಗಳ ಪಕ್ಕದಲ್ಲಿ, ಬದುವಿನ ಮೇಲೆ ಒಂದು ನೇರಳೆ ಮರವೂ ಇತ್ತು. ಹಣ್ಣು ಬಿಡುವ ಕಾಲವಾದ್ದರಿಂದ ಮರದ ತುಂಬೆಲ್ಲಾ ಹಣ್ಣುಗಳು ತುಂಬಿಕೊಂಡಿದ್ದವು.

ವರ್ಷಗಳಿಂದ ಆ ಮರಕ್ಕೆ ಅನೇಕ ಪಕ್ಷಿಗಳು ಬರುತ್ತಿದ್ದವು. ಅದರ ಹಣ್ಣುಗಳನ್ನು ತಿಂದು ಖುಷಿಯಾಗಿದ್ದವು. ಅದು ಕೆಂಚಪ್ಪನ ಗಮನಕ್ಕೆ ಬಂತು. ಅವನಿಗೆ ಹಣ್ಣುಗಳನ್ನು ಕಿತ್ತು ಪೇಟೆಯಲ್ಲಿ ಮಾರಿ ಹಣ ಗಳಿಸುವ ಆಸೆಯಾಯಿತು. ಹೇಗಾದರೂ ಮಾಡಿ ತನ್ನ ಮರದ ಹಣ್ಣುಗಳನ್ನು ಪಕ್ಷಿಗಳಿಂದ ರಕ್ಷಿಸಬೇಕೆಂದು ನಿಶ್ಚಯಿಸಿದನು. ಆದ್ದರಿಂದ ದಿನನಿತ್ಯ ಹಣ್ಣು ತಿನ್ನಲು ಬರುತ್ತಿದ್ದ ಪಕ್ಷಿಗಳನ್ನು ಓಡಿಸಲು  ಕಲ್ಲು ತೂರತೊಡಗಿದನು, ಬಲೆಯನ್ನು ಹಾಕಿದನು. ಹೀಗೆ ನಾನಾ ಕಸರತ್ತುಗಳನ್ನು ಮಾಡಿದನು.

ಕೆಂಚಪ್ಪನ ಜಮೀನಿನ ಪಕ್ಕದಲ್ಲಿಯೆ ಒಂದು ಕಾಲುದಾರಿಯಿತ್ತು. ದಿನನಿತ್ಯ ಈ ದಾರಿಯಲ್ಲಿ ಶಾಲಾ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದರು. ಕೆಂಚಪ್ಪ ದಿನನಿತ್ಯ ಕಿರುಚುತ್ತಾ, ಪಕ್ಷಿಗಳತ್ತ ಕಲ್ಲು ತೂರುತ್ತಿರುವುದನ್ನು  ಶಾಲಾ ಬಾಲಕನೊಬ್ಬ ನೋಡಿದ. ಆ ಹುಡುಗ ಕೆಂಚಪ್ಪನ ಹತ್ತಿರ ಹೋಗಿ “ಆ ಪಕ್ಷಿಗಳಿಗೆ ಕಲ್ಲನ್ನು ಯಾಕೆ ಎಸೆಯುತ್ತಿದ್ದೀರಿ? ಅವುಗಳು ಏನು ತಪ್ಪು ಮಾಡಿವೆ?’ ಎಂದು ಕೇಳಿದ. ಸಿಟ್ಟಿನಿಂದ ಕೆಂಚಪ್ಪ “ಈ ಪಕ್ಷಿಗಳು ನನ್ನ ಹೊಲದಲ್ಲಿರುವ ನೇರಳೆ ಮರದ ಹಣ್ಣುಗಳನ್ನೆಲ್ಲ ತಿನ್ನುತ್ತಿವೆ. ಅವನ್ನು ಮಾರುಕಟ್ಟೆಯಲ್ಲಿ ಮಾರಬೇಕೆಂದಿದ್ದೆ’ ಎಂದನು.

ಕೆಂಚಪ್ಪನ ಉತ್ತರವನ್ನು ಕೇಳಿದ ಬಾಲಕ “ಈ ಮರವನ್ನು ಇಲ್ಲಿ ನೆಟ್ಟಿದ್ದು ಯಾರು?’ ಎಂದು ಪ್ರಶ್ನಿಸಿದನು. ಆಗ ಕೆಂಚಪ್ಪ “ಯಾವುದೋ ಪಕ್ಷಿಯೊಂದು ನೇರಳೆ ಹಣ್ಣನ್ನು ತಿಂದು ಬೀಜವನ್ನು ಉದುರಿಸಿರಬಹುದು’ ಎಂದು ಉತ್ತರಿಸಿದನು.

ಬಾಲಕ “ಹಾಗಾದರೆ ಪಕ್ಷಿಗಳಿಲ್ಲದೇ ಇರುತ್ತಿದ್ದರೆ ನಿನ್ನ ಜಮೀನಿನಲ್ಲಿ ಈ ಮರವೂ ಇರುತ್ತಿರಲಿಲ್ಲ ಎಂದಾಯ್ತು. ಅಂದರೆ, ಈ ಮರ ನಿಜವಾಗಲೂ ಅವುಗಳಿಗೆ ಸೇರಬೇಕಲ್ಲವೆ?’ ಎಂದನು. ಬಾಲಕನ ಜಾಣ್ಮೆಗೆ ಕೆಂಚಪ್ಪ ತಲೆದೂಗಿದ. ಅಷ್ಟು ಹೇಳಿದ ಬಾಲಕ ಶಾಲೆಗೆ ಹೊತ್ತಾಯ್ತು ಎಂದು ಹೇಳಿ ಹೊರಟ. ಕೆಂಚಪ್ಪ ಯೋಚಿಸುತ್ತಾ ಕುಳಿತ. ಅವನಿಗೆ ಬಾಲಕ ಹೇಳಿದ್ದು ಸರಿ ಎನ್ನಿಸಿತು.

ಹಿಂದಿನ ವರ್ಷ ಗದ್ದೆಗೆ ದಾಳಿಯಿಟ್ಟಿದ್ದ ಕೀಟಗಳನ್ನು ಪಕ್ಷಿಗಳೇ ತಿಂದು ಬೆಳೆಯನ್ನು ಉಳಿಸಿದ್ದವು. ಹೀಗಾಗಿ ಪಕ್ಷಿಗಳಿಂದಲೇ ತನಗೆ ಪ್ರಯೋಜನವಾಗುತ್ತಿದೆ ಎನ್ನುವುದನ್ನು ಮನಗಂಡ. ಪಕ್ಷಿಗಳನ್ನು ಓಡಿಸುವುದನ್ನು ಬಿಟ್ಟು ತನ್ನ ಪಾಡಿಗೆ ತಾನು ಮನೆಗೆ ಹಿಂದಿರುಗಿದ.

ಕೃಪೆ: ಸಣ್ಣಮಾರಪ್ಪ, ಚಂಗಾವ (ಸಾಮಾಜಿಕ ಜಾಲತಾಣ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!