ಲಕ್ನೋ, (ಸೆ.17): ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ವೇಳೆ ಆಯತಪ್ಪಿದ ಬಿಜೆಪಿ ಶಾಸಕಿ ಸರಿತಾ ಭಾರದ್ವಾಜ್ ಹಳಿ ಮೇಲೆ ಬಿದ್ದಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ಸರಿತಾ ಇತರ ನಾಯಕರೊಂದಿಗೆ ವಂದೇ ಭಾರತ್ ರೈಲಿಗೆ ಹಸಿರು ಬಾವುಟವನ್ನು ತೋರಿಸಿದ್ದಾರೆ.
ಈ ವೇಳೆ ಪೋಟೋಗಾಗಿ ಫೋಸ್ ನೀಡುವ ವೇಳೆ ಉಂಟಾದ ತಳ್ಳಾಟ, ನೂಕಾಟದಲ್ಲಿ ಪ್ಲಾಟ್‌ಫಾರ್ಮ್ ಅಂಚಿನಲ್ಲಿ ನಿಂತಿದ್ದ ಸರಿತಾ ಆಯತಪ್ಪಿ ರೈಲು ಹಳಿ ಮೇಲೆ ಬಿದ್ದಿದ್ದಾರೆ.
ಕೂಡಲೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮುಖಂಡರು ರೈಲು ಚಾಲಕನಿಗೆ ಮುಂದೆ ಚಲಿಸುವುದನ್ನು ನಿಲ್ಲಿಸುವಂತೆ ಸೂಚಿಸಿದರು. ಪ್ಲಾಟ್‌ಫಾರ್ಮ್‌ನಿಂದ ಟ್ರಾಕ್‌ಗೆ ಮಹಿಳಾ ಶಾಸಕಿ ಬಿದ್ದ ತಕ್ಷಣ, ಕಾರ್ಮಿಕರು ಅವರನ್ನು ಎತ್ತಿಕೊಳ್ಳಲು ಟ್ರಾಕ್‌ಗೆ ಇಳಿದರು. ನಂತರ ಶಾಸಕರನ್ನು ಪ್ಲಾಟ್‌ಫಾರ್ಮ್ ಮೇಲಕ್ಕೆ ಕರೆತರಲಾಯಿತು.
ಸರಿತಾ ಅವರು ಗಾಯಗಳಿಂದ ಪಾರಾದರೆ, ಈ ಘಟನೆ ಉದ್ಘಾಟನೆಯ ಸಂತೋಷಕ್ಕೆ ಒಂದು ಕ್ಷಣ ಅಡ್ಡಿಯಾಯಿತು. ಘಟನೆಯ ಬಳಿಕ ಅವರು ಮತ್ತೆ ರೈಲಿಗೆ ಹಸಿರು ನಿಶಾನೆ ತೋರಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</