ಆಗ್ರಾ, (ಸೆ.17): ಉತ್ತರ ಪ್ರದೇಶದ ಆಗ್ರಾದಲ್ಲಿ ಪತ್ನಿಯೊಬ್ಬಳು ಮದುವೆಯಾದ 40 ದಿನಗಳಿಗೇ ವಿಚ್ಚೇದನಕ್ಕೆ ಮುಂದಾಗಿದ್ದಾಳೆ.
ನಿತ್ಯವೂ ಸ್ನಾನ ಮಾಡದ ಗಂಡನೆ ಜತೆ ಬಾಳಲು ಸಾಧ್ಯವಿಲ್ಲ ಎಂದು ಮಹಿಳೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಮದುವೆಯಾದ 40 ದಿನದಲ್ಲಿ ಅದೂ ಒತ್ತಾಯ ಮಾಡಿದ್ದಕ್ಕೆ ಪತಿರಾಯ 6 ಬಾರಿಯಷ್ಟೇ ಸ್ನಾನ ಮಾಡಿದ್ದಾನೆ. ಆತನ ದೇಹದಿಂದ ಬರುವ ಗಬ್ಬು ವಾಸನೆ ಸಹಿಸ ಲಾಗದು. ಅದೂ ಸಾಲದೆಂದು ಶುದ್ದಿ ಹೆಸರಲ್ಲಿ ವಾರ ಕ್ಕೊಮ್ಮೆ ಮೈಮೇಲೆ ಗಂಗಾಜಲ ಸಿಂಪಡಿಸಿಕೊಳ್ಳುತ್ತಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.
ಕೊಳಕು ಗಂಡನ ಜತೆ ಬಾಳಲು ಸಾಧ್ಯವೇ ಇಲ್ಲ ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಸದ್ಯ ತವರಿಗೆ ತೆರಳಿದ್ದಾಳೆ.
ಗಂಡ ಸುಧಾರಿಸಿಕೊಳ್ಳುತ್ತೇನೆ ಎಂದು ಪುಸಲಾಯಿಸಿದರೂ ಆಕೆ ಜತೆಗೆ ಬಾಳಲು ಒಪ್ಪುತ್ತಿಲ್ಲ. ನ್ಯಾಯಾಲಯ ಕೌನ್ಸಿಲಿಂಗ್ ಪಡೆಯಲು ಸೂಚಿಸಿದೆ. ಇದೂ ಸಾಲದೆಂದು ಆಕೆಯ ತವರು ಮನೆಯವರು ಅಳಿಯನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….