ದೊಡ್ಡಬಳ್ಳಾಪುರ, (ಸೆ.18); ಒಕ್ಕಲಿಗ ಸಮುದಾಯದ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನಂ ನಾಯ್ಡು ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಯುವ ಒಕ್ಕಲಿಗ ಗೆಳೆಯರ ಬಳಗ ಮತ್ತು ಕೆಂಪೇಗೌಡರ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದವತಿಯಿಂದ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ಒಕ್ಕಲಿಗ ಜನಾಂಗದ ಗುತ್ತಿಗೆದಾರರೊಬ್ಬರನ್ನು ಮಾಜಿ ಸಚಿವ ಮುನಿರತ್ನಂ ನಾಯ್ಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ತುಚ್ಛವಾಗಿ ಮಾತನಾಡಿ, ಗುತ್ತಿಗೆದಾರರನ್ನು ಬೆದರಿಸಿದ್ದಾರೆ ಮತ್ತು ಜೀವ ಬೆದರಿಕೆಯನ್ನು ಸಹ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಈ ಬೆದರಿಕೆಯ ಬಗ್ಗೆ ಆಡಿಯೋ ಧ್ವನಿ ಮುದ್ರಣ ಸಾಮಾಜಿಕ ಜಾಲತಾಣದಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ಒಬ್ಬ ಜವಾಬ್ದಾರಿಯುತ ಪ್ರತಿನಿಧಿಯಾದ ಈ ಶಾಸಕನು ಆಡಿರುವ ಮಾತುಗಳು ಮತ್ತು ನಿಂದಿಸಿರುವ ಪದಗಳು ಕೇಳಿದರೆ ಆತನು ಶಾಸಕ ಸ್ಥಾನಕ್ಕೆ ಅರ್ಹನಾಗಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯಪಾಲರು ಮುನಿರತ್ನಂ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ವಿಶ್ವಾಸ್, ಮುನಿಪಾಪ್ಪಣ್ಣ ಎಚ್(ಆರ್ಸಿಎಂ), ನಾಗೇಶ್ ಸಿ ಗೌಡ, ಹರ್ಷ ಗೌಡ, ಮನೋಹರ್ ಎಂ.ಸಿ., ವಕೀಲರಾದ ರವಿ, ಅಶೋಕ್ ಜೋಗಳ್ಳಿ, ದೀಪುಗೌಡ, ರೇವತಿ, ರತ್ನಮ್ಮ, ಸುನಂದ, ಶೋಭ, ದೇವರಾಜು, ಶಿವಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….