ದೊಡ್ಡಬಳ್ಳಾಪುರ, (ಸೆ.18); ಹೆಣ್ಣು ಮಕ್ಕಳ ರಕ್ಷಣೆಗೆ ಕಠಿಣ ಕಾನೂನನ್ನು ಜಾರಿ, ಡ್ರಗ್ಸ್ ಮಾಫಿಯವನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆ ವತಿಯಿಂದ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ನಾಗರಾಜ್, ತಾಲೂಕು ಅಧ್ಯಕ್ಷ ಸಿ.ಶಶಿಧರ್, ಕರ್ನಾಟಕ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರತಿದಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರ, ಕೇಸುಗಳು ಹೆಚ್ಚಾಗಿ ನಡೆಯುತ್ತಿವೆ. ಹಾಗೂ ಯುವ ಪೀಳಿಗೆ ಡ್ರಗ್ಸ್ ಮಾಫಿಯಾಗೆ ಮಾರುಹೋಗುತ್ತಿದ್ದಾರೆ, ಕೂಡಲೇ ರಾಜ್ಯ ಸರ್ಕಾರ ಹೆಚ್ಚೆತ್ತು ಕಠಿಣ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಜಿಲ್ಲಾಧ್ಯಂತ ಹೋರಾಟವನ್ನು ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ್, ಉಪಾಧ್ಯಕ್ಷ ಗಿರೀಶ್, ಹೇಮಂತ್ ಕುಮಾರ್, ಯುವ ಘಟಕದ ತಾಲೂಕು ಅಧ್ಯಕ್ಷ ಅಜಿತ್ ಕುಮಾರ್, ತರುಣ್ ಸರ್ಜಾ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್ ಕೆಆರ್, ಗೌರವಾಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಮುಖಂಡ ಅಗ್ನಿ ವೆಂಕಟೇಶ್, ತಾಲೂಕು ಸಂಚಾಲಕ ಮಹದೇವ್, ವಿಶ್ವನಾಥ್, ರವಿಕುಮಾರ್, ಧನಂಜಯ, ಸಂಘಟನೆ ಕಾರ್ಯದರ್ಶಿ ಸಂಘಟನಾ ಕಾರ್ಯದರ್ಶಿ ಮುನಿ ಆಂಜನಪ್ಪ, ಜಗದೀಶ್, ಕಾನೂನು ಸಲಹೆಗಾರರಾದ ಶ್ರೀನಿವಾಸ್, ಕಿರಣ್ ಕುಮಾರ್, ಸದಸ್ಯರು ವಿನಯ್ ಕುಮಾರ್, ಶಿವಕುಮಾರ್, ವಾಸು, ವೆಂಕಟೇಶ್, ಶಂಕರ್, ಲಿಂಗೇಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–