ನವದೆಹಲಿ, (ಸೆ.20): ಬೈಕ್ ಸವಾರ ಭೀಕರ ರಸ್ತೆ ಅಪಘಾತಕ್ಕೆ ತುತ್ತಾದ ಭಯಾನಕ ಘಟನೆ ಗುರುಗ್ರಾಮ್ನಲ್ಲಿ ನಡೆದಿದೆ. ಕಾರಿಗೆ ಬೈಕ್ ಗುದ್ದಿದ ಕೊನೆ ಕ್ಷಣದ ವಿಡಿಯೋ ಆತನ ಸ್ನೇಹಿತನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ಸೆಪ್ಟೆಂಬರ್ 15ರಂದು ಗುರುಗ್ರಾಮ್ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದ್ದು, 23 ವರ್ಷದ ಅಕ್ಷತ್ ಗಾರ್ಗ್ ಎಂಬ ಯುವಕ ವೇಗವಾಗಿ ಬೈಕ್ ಚಲಾಯಿಸುವಾಗ ಕಾರು ರಾಂಗ್ ಸೈಡ್ನಿಂದ ಬಂದು ಗುದ್ದಿದೆ. ಘಟನೆಯಲ್ಲಿ ಬೈಕ್ ಸವಾರ ಅಕ್ಷತ್ ಗಾರ್ಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Not an #Accident, It’s Murder
— Akassh Ashok Gupta (@peepoye_) September 19, 2024
On Sunday night, young biker #AkshatGarg lost his life when a #Mahindra 3XO, driven recklessly in the wrong direction, hit him. His friend Pradyumn, who witnessed the incident, says that the driver, #KuldeepThakur, was speeding against traffic.… pic.twitter.com/Uasr1PvwvC
ಅಕ್ಷತ್ ಗಾರ್ಗ್ ದೆಹಲಿಯ ದ್ವಾರಕ ನಿವಾಸಿಯಾಗಿದ್ದುಣ ಕಳೆದ ಭಾನುವಾರ ಅಕ್ಷತ್ ಹಾಗೂ ಸ್ನೇಹಿತರು ರಸ್ತೆಯಲ್ಲಿ ಬೈಕ್ ರೈಡಿಂಗ್ ಹೋಗಿದ್ದಾರೆ.
ಈ ವೇಳೆ ವೇಗವಾಗಿ ಹೋಗುತ್ತಿದ್ದ ಅಕ್ಷತ್ಗೆ ರಾಂಗ್ ಸೈಡ್ನಿಂದ ಬಂದ ಕಾರು ಡಿಕ್ಕಿಯಾ ಗಿದೆ. ಕೂಡಲೇ ಯುವಕನನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.