87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲು ಕನ್ನಡ ಜ್ಯೋತಿ ರಥ ಸಂಚಾರ: ನಿಮ್ಮ ಜಿಲ್ಲೆಯಲ್ಲೆಂದು ಗೊತ್ತಾ..?

ಮಂಡ್ಯ. (ಸೆ.20): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20,21 ಹಾಗೂ 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಇದರ ಕನ್ನಡ ಜ್ಯೋತಿ ರಥಕ್ಕೆ ಸೆಪ್ಟೆಂಬರ್ 22ರಂದು ಉತ್ತರ ಕನ್ನಡದ ಭುವನೇಶ್ವರಿ ದೇವಾಲಯದ ಆವರಣದಿಂದ ಚಾಲನೆ ನೀಡಲಾಗುವುದು.

ರಥವು ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಸಂಚರಿಸಲಿದ್ದು, ಸೆಪ್ಟೆಂಬರ್ 22 ರಿಂದ 25 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಕುಮಟ, ಅಂಕೋಲ, ಕಾರವಾರ, ಕಾಣಕೋಣ(ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿಯಲ್ಲಿ ಸಂಚರಿಸಿ ಹಾವೇರಿ ತಲುಪಲಿದೆ.

ಸೆಪ್ಟೆಂಬರ್ 26 ಮತ್ತು 27 ರಂದು ಹಾವೇರಿ ಜಿಲ್ಲೆಯ ಹಾನಗಲ್ಲ, ಹಿರೇಕೇರೂರು, ರಾಣಿಬೆನ್ನೂರು, ಬ್ಯಾಡಗಿ, ಹಾವೇರಿ, ಸವಣೂರು, ಶಿಗ್ಲಾಂವದಲ್ಲಿ ಸಂಚರಿಸಿ ಗದಗ ಜಿಲ್ಲೆ ತಲುಪಲಿದೆ.

ಇದನ್ನೂ ಓದಿ; ಕಲಾವಿದರ ಮಾಸಾಶನ 3000 ರೂಪಾಯಿಗೆ ಏರಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಸೆಪ್ಟೆಂಬರ್ 28 ಮತ್ತು 29 ರಂದು ಗದಗ ಜಿಲ್ಲೆಯ ಲಕ್ಮೇಶ್ವರ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ರೋಣ, ನರಗುಂದ, ಗದಗ, ಬೆಟಗೇರಿಯಲ್ಲಿ ಸಂಚರಿಸಿ ಧಾರವಾಡ ಜಿಲ್ಲೆ ತಲುಪಲಿದೆ.

ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 01 ರಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಳ್ನಾವರದಲ್ಲಿ ಸಂಚರಿಸಿ ಬೆಳಗಾವಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 02 ರಿಂದ 05 ರವರೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಬೆಳಗಾವಿ, ಗೋಕಾಕ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಕಾಗವಾಡ, ಅಥಣಿಯಲ್ಲಿ ಸಂಚರಿಸಿ ಬಾಗಲಕೋಟೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 06 ಹಾಗೂ 07 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಮಹಲಿಂಗಾಪುರ, ಮುಧೋಳ, ಬಾಗಲಕೋಟೆ, ಹುನಗುಂದ, ಕೂಡಲಸಂಗಮದಲ್ಲಿ ಸಂಚರಿಸಿ ವಿಜಯಪುರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 08 ಹಾಗೂ 09 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ, ಬಬಲೇಶ್ವರ, ತಿಕೋಟಾ, ವಿಜಯಪುರ, ಚಡಚಣ, ಇಂಡಿ, ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ಬಸವನ ಬಾಗೇವಾಡಿಯಲ್ಲಿ ಸಂಚರಿಸಿ ಕಲಬುರಗಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 10 ಹಾಗೂ 11 ರಂದು ಕಲಬುರಗಿ ಜಿಲ್ಲೆಯ ಯಡ್ರಾಮಿ, ಜೀವರ್ಗಿ, ಅಫಜಲ್ಪುರ, ಅಳಂದ, ಕಲಬುರಗಿ, ಶಹಾಪುರ, ಚಿತ್ತಾಪುರ, ಸೇಡಂ, ಕಾಳಗಿ, ಚಿಂಚೋಳಿ, ಕಮಲಾಪುರದಲ್ಲಿ ಸಂಚರಿಸಿ ಬೀದರ್ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 12 ಹಾಗೂ 13 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮದಾಬಾದ್, ಹುಲಸೂರು, ಭಾಲ್ಕಿ, ಔರದ್, ಬೀದರ್, ಚಿಟಗುಪ್ಪಾದಲ್ಲಿ ಸಂಚರಿಸಿ ಯಾದಗಿರಿ ಜಿಲ್ಲೆಗೆ ತಲುಪಲಿದೆ.

ಅಕ್ಟೋಬರ್ 14 ಮತ್ತು 15 ರಂದು ಯಾದಗಿರಿ ಜಿಲ್ಲೆಯ ಗುರುಮಠಕಲ್, ಯಾದಗಿರಿ, ವಡಗೇರಾ, ಶಹಾಪುರ, ಸುರಪುರ, ಹುಣಸಗಿ, ಕೆಂಬಾವಿ, ಸೈದಾಪುರ, ಕೊಡೆಕಲ್, ಖಾನಪುರದಲ್ಲಿ ಸಂಚರಿಸಿ ರಾಯಚೂರು ಜಿಲ್ಲೆ ತಲುಪಲಿದೆ.

ಅಕ್ಟೋಬರ್ 16 ಮತ್ತು 17 ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ರಾಯಚೂರು, ಮಾನ್ವಿ, ಶಿರವಾರ, ಮಸ್ಕಿ, ಸಿಂಧನೂರು ಇಲ್ಲಿ ಸಂಚರಿಸಿ ಕೊಪ್ಪಳ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 18 ಮತ್ತು 19 ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕುಕನೂರು, ಕೊಪ್ಪಳ, ಗಂಗಾವತಿ, ಕನಕಗಿರಿ, ಕಾರಟಗಿಯಲ್ಲಿ ಸಂಚರಿಸಿ ಬಳ್ಳಾರಿ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 20 ಮತ್ತು 21 ರಂದು ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಕುರುಗೋಡ, ಬಳ್ಳಾರಿ, ಸಂಡೂರು, ಕಂಪ್ಲಿಯಲ್ಲಿ ಸಂಚರಿಸಿ ವಿಜಯನಗರ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 22 ಮತ್ತು 23 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿಯಲ್ಲಿ ಸಂಚರಿಸಿ ದಾವಣಗೆರೆ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 24 ಮತ್ತು 25 ರಂದು ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ನ್ಯಾಮತಿಯಲ್ಲಿ ಸಂಚರಿಸಿ ಶಿವಮೊಗ್ಗ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 26 ರಿಂದ 28 ರವರೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿಯಲ್ಲಿ ಸಂಚರಿಸಿ ಚಿತ್ರದುರ್ಗ ಜಿಲ್ಲೆ ತಲುಪಲಿದೆ.

ಅಕ್ಟೋಬರ್ 29 ರಿಂದ 31 ರವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಿತ್ರದುರ್ಗ, ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಪರಶುರಾಮಪುರ, ಭರ್ಮಸಾಗರ, ಭೀಮಸಮುದ್ರ, ಧರ್ಮಪುರ, ಬೂದಿಹಾಳ, ವಾಣಿವಿಲಾಸ ಸಾಗರದಲ್ಲಿ ಸಂಚರಿಸಿ ಚಿಕ್ಕಮಗಳೂರು ಜಿಲ್ಲೆ ತಲುಪಲಿದೆ.

ನವೆಂಬರ್ 01 ರಿಂದ 04 ರವರೆಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಕಡೂರು, ತರಿಕೆರೆ, ಚಿಕ್ಕಮಗಳೂರು, ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ, ಕಳಸದಲ್ಲಿ ಸಂಚರಿಸಿ ಉಡುಪಿ ಜಿಲ್ಲೆ ತಲುಪಲಿದೆ.

ನವೆಂಬರ್ 05 ಹಾಗೂ 06 ರಂದು ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳದಲ್ಲಿ ಸಂಚರಿಸಿ ದಕ್ಷಿಣ ಕನ್ನಡ ಜಿಲ್ಲೆ ತಲುಪಲಿದೆ.

ನವೆಂಬರ್ 07 ರಿಂದ 09 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಮಂಗಳೂರು, ಕಾಸರಗೋಡು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯದಲ್ಲಿ ಸಂಚರಿಸಿ ಕೊಡಗು ಜಿಲ್ಲೆ ತಲುಪಲಿದೆ.

ನವೆಂಬರ್ 10 ಹಾಗೂ 11 ರಂದು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಪುನ್ನಂಪೇಟೆ, ಸೋಮವಾರಪೇಟೆಯಲ್ಲಿ ಸಂಚರಿಸಿ ಹಾಸನ ಜಿಲ್ಲೆ ತಲುಪಲಿದೆ.

ನವೆಂಬರ್ 12 ರಿಂದ 14 ರವರೆಗೆ ಹಾಸನ ಜಿಲ್ಲೆಯ ಅರಕಲಗೂಡು, ಹೊಳೆನರಸಿಪುರ, ಚನ್ನರಾಯಪಟ್ಟಣ, ಹಾಸನ, ಆಲೂರು, ಸಕಲೇಶಪುರ, ಬೇಲೂರು, ಅರಸೀಕೆರೆಯಲ್ಲಿ ಸಂಚರಿಸಿ ತುಮಕೂರು ಜಿಲ್ಲೆ ತಲುಪಲಿದೆ.

ನವೆಂಬರ್ 15 ರಿಂದ 18 ರವರೆಗೆ ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ, ಚೇಳೂರು, ಚನ್ನರಾಯದುರ್ಗ, ನಿಟ್ಟೂರು, ಮಾಯಸಂದ್ರದಲ್ಲಿ ಸಂಚರಿಸಿ ಚಿಕ್ಕಬಳ್ಳಾಪುರ ಜಿಲ್ಲೆ ತಲುಪಲಿದೆ.

ನವೆಂಬರ್ 19 ಹಾಗೂ 20 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಚಿಕ್ಕಬಳ್ಳಾಪುರ, ಶಿಡ್ಲಾಘಟ್ಟ, ಬಾಗೇಪಲ್ಲಿ, ಚಿಂತಾಮಣಿ, ಚೇಳೂರಿನಲ್ಲಿ ಸಂಚರಿಸಿ ಕೋಲಾರ ಜಿಲ್ಲೆ ತಲುಪಲಿದೆ.

ನವೆಂಬರ್ 21 ರಿಂದ 23 ರವರೆಗೆ ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಕೆ.ಜಿ.ಎಫ್‌ನಲ್ಲಿ ಸಂಚರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ತಲುಪಲಿದೆ.

ನವೆಂಬರ್ 24 ರಿಂದ 26 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ದಾಬಸ್‌ಪೇಟೆ, ದೊಡ್ಡಬೆಳವಂಗಲದಲ್ಲಿ ಸಂಚರಿಸಿ ಬೆಂಗಳೂರು ನಗರ ಜಿಲ್ಲೆ ತಲುಪಲಿದೆ.

ನವೆಂಬರ್ 27 ರಿಂದ 30 ರವರೆಗೆ ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು, ಯಲಹಂಕ, ಆನೇಕಲ್, ಕೆಂಗೇರಿ, ಕೃಷ್ಣರಾಜಪುರಂನಲ್ಲಿ ಸಂಚರಿಸಿ ರಾಮನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 01 ರಿಂದ 03 ರವರೆಗೆ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಹಾರೋಹಳ್ಳಿಯಲ್ಲಿ ಸಂಚರಿಸಿ ಚಾಮರಾಜನಗರ ಜಿಲ್ಲೆ ತಲುಪಲಿದೆ.

ಡಿಸೆಂಬರ್ 04 ರಿಂದ 06 ರವರೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಹನೂರು, ಯಳಂದೂರು, ಚಾಮರಾಜನಗರ, ಗುಂಡ್ಲುಪೇಟೆಯಲ್ಲಿ ಸಂಚರಿಸಿ ಮೈಸೂರು ಜಿಲ್ಲೆ ತಲುಪಲಿದೆ.

ಡಿಸೆಂಬರ್ 07 ರಿಂದ 10 ರವರೆಗೆ ಮೈಸೂರು ಜಿಲ್ಲೆ ಯ ಸರಗೂರು, ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್ ನಗರ, ಸಾಲಿಗ್ರಾಮ, ಮೈಸೂರು, ನಂಜನಗೂಡು, ಟಿ.ನರಸೀಪುರದಲ್ಲಿ ಸಂಚರಿಸಿ ಮಂಡ್ಯ ಜಿಲ್ಲೆ ತಲುಪಲಿದೆ.

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!