ಬೆಂಗಳೂರು, (ಸೆ.21): ಮಹಿಳೆಯನ್ನು 30ಕ್ಕೂ ಹೆಚ್ಚು ತುಂಡು-ತುಂಡಾಗಿ ಬರ್ಬರ ಹತ್ಯೆ ಘಟನೆ ವೈಯಾಲಿಕಾವಲ್‌ನಲ್ಲಿ ವರದಿಯಾಗಿದೆ. ಕೊಲೆಯಾದ ಮಹಿಳೆಯನ್ನು 29 ವರ್ಷದ ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ.
ಮಹಾಲಕ್ಷ್ಮಿಯು ವಿವಾಹಿತಳಾಗಿದ್ದು ನೆಲಮಂಗಲದವರು ಎಂದು ತಿಳಿದುಬಂದಿದೆ. ಕಳೆದ 4 ವರ್ಷಗಳಿಂದ ಗಂಡನನ್ನು ಬಿಟ್ಟು ವೈಯಾಲಿಕಾವಲ್ ನಲ್ಲಿ ನೆಲೆಸಿ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ.
ಮಹಾಲಕ್ಷ್ಮಿಗೆ 4 ವರ್ಷದ ಮಗು ಸಹ ಇದೆ. ಓರ್ವ ಯುವಕ ಮಹಾಲಕ್ಷ್ಮೀಗೆ ಪಿಕಪ್ & ಡ್ರಾಪ್ ಮಾಡುತ್ತಿದ್ದನು. ಅವನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮನಸ್ತಾಪದಿಂದ ಗಂಡನಿಂದ ದೂರವಿದ್ದ ಮಹಾಲಕ್ಷ್ಮೀ ತನ್ನ ಮಗುವನ್ನು ಗಂಡನ ಬಳಿ ಬಿಟ್ಟಿದ್ದಳು ಎಂಬ ಮಾಹಿತಿ ಕೇಳಿಬಂದಿದೆ. ಸೆ.2ರಿಂದ ಪತ್ನಿಯ ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಮೃತಳ ಪತಿ ಮಹಾಲಕ್ಷ್ಮೀ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ಹಂತಕನು ಮಹಾಲಕ್ಷ್ಮೀಯ ಮೊಬೈಲ್ ಸಹ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗುತ್ತಿದೆ.
ಸದ್ಯ ಸ್ಥಳದಲ್ಲಿ FSL ಟೀಂ, ಬೆರಳಚ್ಚು ಪರಿಣಿತರು ಹಾಗೂ ವೈಯಾಲಿಕಾವಲ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧದ ತನಿಖೆಗೆ ಪೊಲೀಸರು ಒಟ್ಟು 5 ತಂಡಗಳಾಗಿ ರಚಿಸಲಾಗಿದ್ದು, ಹಂತಕನ ಪತ್ತೆಗೆ ಬಲೆ ಬೀಸಿದೆ.