ಬೆಂಗಳೂರು: ಸೋಲಾರ್ ಪಾರ್ಕ್ ಯೋಜನೆಯಲ್ಲಿ ಎತ್ತುವಳಿ ಮಾಡಿದ್ದು ಎಷ್ಟು? ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು JDS ಪ್ರಶ್ನೆ ಮಾಡಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಟ್ವಿಟರ್) ಪೊಸ್ಟ್ ಮಾಡಿರುವ JDS ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸದೇ, ಫೋಟೋ ಬಳಸಿ ಗಂಭೀರ ಆರೋಪ ಮಾಡಿದೆ.
ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಮುಖ್ಯಮಂತ್ರಿ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ ಎಂದು ಟೀಕಿಸಿದೆ. ಹೈಕಮಾಂಡ್ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್ ಏಜೆಂಟ್, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು.
ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ..!
— Janata Dal Secular (@JanataDal_S) October 6, 2024
ಹೈಕಮಾಂಡ್ ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್ ಏಜೆಂಟ್, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು.
ಹೊಡಿಬಡಿ ಸಂಸ್ಕೃತಿಯ ರಿಯಲ್ಎಸ್ಟೇಟ್ ದಂಧೆಕೋರ , ಹವಾಲಾ ಮಾಫಿಯಾ , ಭೂಗಳ್ಳ @ ಸಿಡಿ… pic.twitter.com/RLCkmZlACK
ಹೊಡಿಬಡಿ ಸಂಸ್ಕೃತಿಯ ರಿಯಲ್ ಎಸ್ಟೇಟ್ ದಂಧೆಕೋರ, ಹವಾಲಾ ಮಾಫಿಯಾ, ಭೂಗಳ್ಳ ಸಿಡಿ ಶಿವುನ ಆಸ್ತಿ ಸಂಪಾದನೆಯ ಗುಟ್ಟು ಇಡೀ ದೇಶಕ್ಕೆ ಚಿರಪರಿಚಿತ ಎಂದು JDS ವಾಗ್ದಾಳಿ ನಡೆಸಿದೆ.
ಬೇನಾಮಿ ಆಸ್ತಿ, ಅಕ್ರಮ ಹಣ ವರ್ಗಾವಣೆ
ಪ್ರಕರಣಗಳಲ್ಲಿ ರೌಡಿ ಕೊತ್ವಾಲನ ಶಿಷ್ಯ ಒಂದು ಕೈ ಮೇಲು. ಬ್ಯಾಂಡ್ ಬೆಂಗಳೂರು ಹೆಸರಲ್ಲಿ ದೋಚುತ್ತಿರುವ ಕಲೆಕ್ಷನ್ ಗಿರಾಕಿಯ ಘೋಷಿತ 1,413 ಕೋಟಿ ರೂ. ಆಸ್ತಿ ಗಳಿಕೆಯ ಸಿಕ್ರೇಟ್ ಇವೇ ಅಲ್ಲವೇ? ಎಂದು JDS ಪ್ರಶ್ನಿಸಿದೆ.