ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಗರಣಗಳ ಸುತ್ತ ಗಿರಕಿ ಹೊಡೆಯುತ್ತಿದೆಯೇ ಹೊರತು, ಹಿಂಗಾರು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HDK) ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿ ಸೇರಿ ಯಾವುದೇ ಮಂತ್ರಿಗಳಿಗೆ ಜನರ ಸಮಸ್ಯೆ ಬಗೆಹರಿಸುವ ಮನಸ್ಸು ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಹಿಂಗಾರು ಮಳೆ ನಿರೀಕ್ಷೆಗೂ ಮೀರಿ ಹೆಚ್ಚಾಗಿ ಬರುತ್ತಿದೆ. ಬೆಂಗಳೂರಲ್ಲಿ ಗುಂಡಿ ಮುಚ್ಚಿಲ್ಲ ಮಳೆ ಹಾನಿ ನಿಯಂತ್ರಣಕ್ಕೆ ಸೂಕ್ತ ಸಿದ್ಧತೆ ನಡೆಸಿಲ್ಲ. ಬಹುತೇಕ ಭಾಗಗಳಲ್ಲಿ ಇದೆ ಪರಿಸ್ಥಿತಿ ಇದೆ ಎಂದು HDK ಕಿಡಿಕಾರಿದರು.
ಇದನ್ನೂ ಓದಿ: HMT ಕಾರ್ಖಾನೆ ಪುನರುದ್ಧಾರಕ್ಕೆ ಪ್ರಯತ್ನಗಳು ನಡೆದಿವೆ: ಹೆಚ್.ಡಿ.ಕುಮಾರಸ್ವಾಮಿ
ಮುಂಗಾರು ಮಳೆ ಚೆನ್ನಾಗಿ ಆಯ್ತು ಎಲ್ಲಾ ನೀರನ್ನು ತಮಿಳುನಾಡಿಗೆ ಹರಿಬಿಡಲಾಯ್ತು ಮಂಡ್ಯ ಸೇರಿ ಅನೇಕ ಕಡೆ ಬಿತ್ತನೆ ಮಾಡಿಲ್ಲ ರೈತರ ಸಂಕಷ್ಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಜನರ ಸಂಕಷ್ಟಕ್ಕೆ ಸ್ಪಂಸಿ ಮನಸ್ಥಿತಿ ರಾಜ್ಯ ಸರ್ಕಾರಕ್ಕಿಲ್ಲ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ#LatestUpdates #LatestUpdates #HDK pic.twitter.com/bhWXAu1nTi
— Harithalekhani (@harithalekhani) October 6, 2024
ಜಾತಿ ಜನಗಣತಿ ಇಷ್ಟು ದಿನ ಮಾಡಿದವರು ಈಗ ಮಾಡ್ತಾರಾ..? ಎಂದು ಪ್ರಶ್ನಿಸಿದ HDK ಇದು ರಾಜಕೀಯ ಅಷ್ಟೆ ಎಂದರು.