ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಶ್ರೀರಾಮುಲು (Sriramulu) ಅವರ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಸ್ಟಾಗ್ರಾಂ ಖಾತೆಗಳನ್ನು ಖದೀಮರು ಹ್ಯಾಕ್ ಮಾಡಿದ್ದಾರೆ.
ನಂತರ ಶೇರ್ ಮಾರ್ಕೆಟ್ ಲಿಂಕ್ ಕಳುಹಿಸಿರುವ ಹ್ಯಾಕರ್‌ಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಹ್ಯಾಕ್ ಆದ ವಿಚಾರ ತಿಳಿಯುತ್ತಿದ್ದಂತೆ ಶ್ರೀರಾಮುಲು (Sriramulu) ಯಾರಿಗೂ ಹಣ ನೀಡದಂತೆ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ತುರ್ತು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ತಾಂತ್ರಿಕ ದೋಷದಿಂದ ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡ ನಕಲಿ ಫೇಸ್‌ಬುಕ್ ಹಾಗೂ ಇನ್ಸ್ಸ್ಟಾಗ್ರಾಂ ಖಾತೆಗಳಲ್ಲಿ ಸಂದೇಶ ಮಾಡುವ ನಕಲಿ ಆ್ಯಪ್ ಲಿಂಕ್ ಹಾಕಲಾಗಿದ್ದು,ಇದಕ್ಕೆ ನಾನು ಹೊಣೆಯಲ್ಲ ಎಂದು ತಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ ಎಂದು ಹೇಳಿದ್ದಾರೆ.