ದೊಡ್ಡಬಳ್ಳಾಪುರ: ಕನ್ನಡ ಕಡೆಗಣಿಸಿ ಆಂಗ್ಲ ಭಾಷೆಯಲ್ಲಿ ಜಾಹಿರಾತು ಮುದ್ರಿಸಿ ಅಳವಡಿಸಿದ್ದ ಖಾಸಗಿ ಬಡವಾಣೆಯ ಜಾಹೀರಾತು ಫಲಕಗಳಿಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಮಸಿ ಬಳೆದಿದ್ದಾರೆ.
ಕನ್ನಡ ಕಡ್ಡಾಯವೆಂಬ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ನೇತೃತ್ವದ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ (ಟಿಬಿ ವೃತ್ತ) ಡಿಕ್ರಾಸ್ ವರೆಗೆ ಅಳವಡಿಸಲಾಗಿದ್ದ ಜಾಹಿರಾತು ಫಲಕಗಳಿಗೆ ಮಸಿ ಬಳೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕನ್ನಡ ಕಡೆಗಣಿಸಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಾಹಿರಾತು ಅಳವಡಿಸಿದ್ದರೆ ಕೂಡಲೇ ತೆರವು ಮಾಡಿ ಕನ್ನಡದಲ್ಲಿ ಪ್ರಕಟಿಸಬೇಕು. ಇಲ್ಲವಾದಲ್ಲಿ ಮಸಿ ಬಳೆಯಲಾಗುವುದು ಎಂದು ಹಮಾಮ್ ವೆಂಕಟೇಶ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು, ಕಾನೂನು ಸಲಹೆಗಾರ ಮಲತಹಳ್ಳಿ ಆನಂದ್, ಕಾರ್ಯದರ್ಶಿಗಳಾದ ಮಂಜು, ಮುಖೇನಳ್ಳಿ ರವಿ, ನಗರ ಕಾರ್ಯದರ್ಶಿ ಸಿರಾಜ್, ತುಪೆಲ್, ಸೂರಿ ಮತ್ತಿತರರಿದ್ದರು.