ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಆಯುಧಪೂಜೆ-ವಿಜಯದಶಮಿ ಹಬ್ಬಕ್ಕೆ ಸಿದ್ದತೆಗಳು ನಡೆದಿದ್ದು, ಬೂದುಕುಂಬಳ, ಹೂ ಹಣ್ಣು, ಬಾಳೆಕಂದು, ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳ ಏರಿಳಿತಗಳ ನಡುವೆ ಸ್ವಾಗತ ನಡೆದಿದೆ.
ನಗರದ ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ಬೂದು ಕುಂಬಳಕಾಯಿ ಬೆಲೆ ಮಾತ್ರ ಸಾಧಾರಣವಾಗಿದ್ದು, ಕೆ.ಜಿಗೆ 20 ರೂವರೆಗೆ ಇದೆ.
ಹೂವಿನ ಬೆಲೆಗಳು ಗಗನಕ್ಕೇರಿವೆ. ಕಾಕಡ, ಮಳ್ಳೆ ಹೂವಿನ ಬೆಲೆ ಕೆ.ಜಿಗೆ 600ರಿಂದ 800 ರೂಗಳ ವರೆಗಿದ್ದರೆ ಕನಕಾಂಬರ 1800 ರೂ ಶಾಮಂತಿಗೆ, ಬಟನ್ಸ್ , ಗುಲಾಬಿ ಮೊದಲಾದ ಹೂವಿನ ಬೆಲೆಗಳು ಕೆ.ಜಿಗೆ 200ರೂ ದಾಟಿವೆ.

ಬಾಳೆ ಹಣ್ಣು ಕೆಜಿಗೆ 40ರಿಂದ 90ರೂ, ಸೇರಿದಂತೆ ಇತರ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಬಾಳೆಕಂದುಗಳ ಬೆಲೆ ಸಹ ಹೆಚ್ಚಾಗಿದ್ದು, ಆಯುಧ ಪೂಜೆಗಾಗಿ ನಗರದಲ್ಲಿ ಮಗ್ಗಗಳು ಯಂತ್ರಗಳು, ವಾಹನಗಳು ಮೊದಲಾದವುಗಳನ್ನು ಶುದ್ದ ಮಾಡಿ ಪೂಜೆಗೆ ಅಣಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ:
ಶುಕ್ರವಾರ ನಡೆಯುವ ಆಯುಧಪೂಜೆಯನ್ನು ಬಹಳಷ್ಟು ಸರ್ಕಾರಿ ಕಚೇರಿಗಳಲ್ಲಿ ಗುರುವಾರವೇ ನೆರವೇರಿಸಲಾಯಿತು. ಡಿ.ಗ್ರೂಪ್ ನೌಕರರು ಸೇರಿದಂತೆ ಅಧಿಕಾರಿಗಳು ಕಾರ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಯಿತು.
ಇದನ್ನೂ ಓದಿ: ಜೆಡಿಎಸ್‌ನಿಂದ ಸುಧಾಕರ್ ಗೆಲುವು ಎಂದ ಹರೀಶ್ ಗೌಡ..!; ಸಾಕ್ಷಿ ಏನು ಎಂದ ಬಿಜೆಪಿ ಮುಖಂಡರು
ಮೂರು ದಿನಗಳು ಸರ್ಕಾರಿ ರಜೆ ಇರುವುದರಿಂದ ಸರ್ಕಾರಿ ನೌಕರರು ಹಾಗೂ ಉದ್ಯೋಗಿಗಳು ಬಹಳಷ್ಟು ಮಂದಿ ರಜಾ ದಿನಗಳಿಗೆ ಪ್ರವಾಸಕ್ಕೆ ಹೋಗಲು ಸಿದ್ದರಾಗುತ್ತಿದ್ದಾರೆ.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹಬ್ಬದ ಅಬ್ಬರ ಈ ಬಾರಿ ಕಡಿಮೆ ಇದೆ. ಪ್ರತಿ ಹಬ್ಬಗಳಲ್ಲಿಯೂ ಹೂ ಹಣ್ಣುಗಳ ಬೆಲೆಗಳ ಏರಿಕೆ ಸಾಮಾನ್ಯವಾಗಿದ್ದು, ಹಬ್ಬವನ್ನು ಆಚರಿಸಲೇಬೇಕೆಂದು ಸಾರ್ವಜನಿಕರು ಮಾರುಕಟ್ಟೆಗೆ ಆಗಮಿಸುತ್ತಿದ್ದಾರೆ.