ಮುಂಬೈ: ನ್ಯಾಷನಲಿಸ್ ಕಾಂಗ್ರೆಸ್ ಪಾರ್ಟಿ ಹಿರಿಯ ಮುಖಂಡ ಬಾಬಾ ಸಿದ್ದಿಕ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆಗೈದಿದ್ದಾರೆ.
ಶನಿವಾರ ಸಂಜೆ ಈ ಘಟನೆ ನಡೆದಿದ್ದು ಮೂರು ಗುಂಡೇಟುಳಿಂದ ಗಾಯಗೊಂಡಿದ್ದ ಬಾಬಾ ಸಿದ್ದಿಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳದಲ್ಲಿದ್ದವರು ಯತ್ನಿಸಿದರಾದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮೂರು ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದದ ಬಾಬಾ ಸಿದ್ದಿಕ್ ಆಹಾರ ಇಲಾಖೆ ಹಾಗೂ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಬಾಲಿವುಡ್ ನಟರಾದ ಸಂಜಯ್ ದತ್, ತಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಆಪ್ತ ಬಳಗದಲ್ಲಿ ಬಾಬಾ ಸಿದ್ದಿಕ್ ಗುರುತಿಸಿಕೊಂಡದ್ದರು.
ಹತ್ಯೆಗೆ ಇದುವರೆಗೂ ಕಾರಣ ತಿಳಿದುಬಂದಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆಂದು ವರದಿಯಾಗಿದೆ.